ಇತಿಹಾಸಗಳನ್ನ ಕತೆಗಳನ್ನ ಹುಡುಕುತ್ತಾ ಹೋದಾಗ ರಾಜರಿಗೆ ನೂರೆಂಟು ರಾಣಿಯರು ಇರ್ತಿದ್ರು ಎಂಬ ಕತೆ ತಿಳಿದು ಬರುತ್ತೆ. ಆಗೆಲ್ಲ ಮದುವೆ ವಿಚಾರವಾಗಿ ಯಾವುದೇ ಕಾನೂನುಗಳು ಇಲ್ಲದ್ದರಿಂದ ಎಷ್ಟೇ ಮದುವೆಯಾದ್ರೂ ಸಹ ಪ್ರಶ್ನಿಸುವವರು ಯಾರೂ ಇರ್ತಾ ಇರಲಿಲ್ಲ. ಆದರೆ 21ನೇ ಶತಮಾನದಲ್ಲಿ ಇದೇ ರೀತಿ ಬದುಕುತ್ತೇನೆ ಎಂದರೆ ಸಾಧ್ಯವಿಲ್ಲ.
ʼಕೊವ್ಯಾಕ್ಸಿನ್ʼ ಲಸಿಕೆ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ
ಆದರೆ ಇಲ್ಲೊಬ್ಬ ಆಸಾಮಿ ಬರೋಬ್ಬರಿ 37 ಬಾರಿ ಮದುವೆಯಾಗೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡಿದ್ದಾನೆ. ವೃದ್ಧನೊಬ್ಬ ತನ್ನ 28 ಹೆಂಡತಿಯರು, 135 ಮಕ್ಕಳು ಹಾಗೂ 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಮದುವೆಯಾಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಲಸಿಕೆಗಾಗಿ 100 ಕೋಟಿ ರೂಪಾಯಿ; ಕಾಂಗ್ರೆಸ್ ಪ್ರಸ್ತಾಪ ತಿರಸ್ಕರಿಸಿದ ರಾಜ್ಯ ಸರ್ಕಾರ
ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಟ್ವಿಟರ್ನಲ್ಲಿ ಈ 45 ಸೆಕೆಂಡ್ಗಳ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಧೈರ್ಯವಂತ ಮನುಷ್ಯ, 28 ಪತ್ನಿಯರು, 135 ಮಕ್ಕಳು ಹಾಗೂ 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಮದುವೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನ ಎಲ್ಲಿ ಚಿತ್ರೀಕರಿಸಲಾಗಿದೆ ಅನ್ನೋದಕ್ಕೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.