
ಪ್ರೀತಿಯಲ್ಲಿ ಬಿದ್ದ ಜನರು ಎಲ್ಲವನ್ನೂ ಮರೆಯುತ್ತಾರೆ. ಜಾತಿ, ಮತದ ಬೇಧವಿಲ್ಲದೆ ಪ್ರಪಂಚ ಮರೆತು ಪ್ರೀತಿ ಮಾಡ್ತಾರೆ. ಬಿಹಾರ್ನ ಸಾಸಾರಾಮ್ ನಲ್ಲಿ ಪ್ರೇಮ ವಿವಾಹವೊಂದು ಚರ್ಚೆಗೆ ಬಂದಿದೆ. ಪ್ರೀತಿಸಿ ಮದುವೆಯಾದ ವರ, ವಧುವನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದ್ರೆ ಸೊಸೆ ನೋಡ್ತಿದ್ದಂತೆ ಅತ್ತೆ ಮೂರ್ಛೆ ಹೋಗಿದ್ದಾಳೆ.
ಮಗ ದೇವಸ್ಥಾನದಲ್ಲಿ ಮದುವೆಯಾಗ್ತಿದ್ದಾನೆಂಬ ಸಂಗತಿ ತಾಯಿಗೆ ಮೊದಲೇ ಗೊತ್ತಿತ್ತಂತೆ. ಇದೇ ಕಾರಣಕ್ಕೆ ಮಗ-ಸೊಸೆ ಸ್ವಾಗತಕ್ಕೆ ಸಿದ್ಧವಾಗಿದ್ದಳಂತೆ. ಆದ್ರೆ ಮನೆಗೆ ಬಂದ ಸೊಸೆ ನೋಡಿ ದಂಗಾಗಿದ್ದಾಳೆ. ಮಗ ಮಂಗಳ ಮುಖಿಯನ್ನು ಮದುವೆಯಾಗಿ ಬಂದಿದ್ದನಂತೆ. ಪ್ರಜ್ಞೆ ಬರ್ತಿದ್ದಂತೆ ತಾಯಿ ಗಲಾಟೆ ಶುರು ಮಾಡಿದ್ದಾಳೆ. ಈ ಸಂಬಂದ ಒಪ್ಪಿಕೊಳ್ಳದೆ ಇಬ್ಬರನ್ನು ಮನೆಯಿಂದ ಹೊರ ಹಾಕಿದ್ದಾಳೆ. ಇದು ಹಳ್ಳಿಯಲ್ಲಿ ಚರ್ಚೆಯ ವಿಷ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಮದುವೆ ಒಪ್ಪಿಗೆ ಬಗ್ಗೆ ಚರ್ಚೆಯಾಗ್ತಿದೆ.
ವರ ಗೋಪಿ ಡಾನ್ಸ್ ಗ್ರೂಪ್ ನಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಅಲ್ಲಿಗೆ ಬರ್ತಿದ್ದ ಮಂಗಳಮುಖಿ ನಂದಿತಾ ಮೇಲೆ ಪ್ರೀತಿ ಚಿಗುರಿದೆ. ಇಬ್ಬರು ಮದುವೆ ನಿರ್ಧಾರಕ್ಕೆ ಬಂದಿದ್ದಾರೆ. ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.