alex Certify 28 ಪತ್ನಿಯರ ಮುಂದೆ 37ನೇ ಮದುವೆಯಾದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

28 ಪತ್ನಿಯರ ಮುಂದೆ 37ನೇ ಮದುವೆಯಾದ ಭೂಪ…!

ಕೆಲವರು ಒಂದು ಮದುವೆ ಮಾಡ್ಕೊಂಡು ಉಸ್ಸಪ್ಪ ಅಂತಾರೆ. ಯಾಕಪ್ಪ ಮದುವೆಯಾದೆ ಅಂತಾ ಗೊಣಗುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಈ ವ್ಯಕ್ತಿ ಒಂದಲ್ಲ ಎರಡಲ್ಲ ಬರೋಬ್ಬರಿ 37ನೇ ಮದುವೆಯಾದ್ರೂ ಆತನಿಗೆ ಮದುವೆ ಕಷ್ಟ ಗೊತ್ತಾಗ್ಲಿಲ್ಲ.

ಯಸ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿರುವ ವ್ಯಕ್ತಿ ಬರೋಬ್ಬರಿ 37ನೇ ಮದುವೆಯಾಗಿದ್ದಾನೆ. 28 ಹೆಂಡತಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂದೆ ಮದುವೆಯಾಗಿದ್ದಾನೆ.

ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ,ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಧೈರ್ಯಶಾಲಿ ಮನುಷ್ಯ. 37 ಮದುವೆ, 28 ಪತ್ನಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಜೊತೆ ಬದುಕಿದ್ದಾನೆಂದು ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಭರ್ಜರಿ ಕಮೆಂಟ್ ಬರ್ತಿದೆ. ಬಳಕೆದಾರರು ಹಾಸ್ಯಭರಿತ ಕಮೆಂಟ್ ಮಾಡ್ತಿದ್ದಾರೆ. ಏನ್ ಅದೃಷ್ಟನಪ್ಪ ಇವಂದು. ಇಲ್ಲಿ ಒಬ್ಬಳನ್ನು ಸಂಭಾಳಿಸೋದೆ ಕಷ್ಟ ಅಂತಾ ಒಬ್ಬರು ಕಮೆಂಟ್ ಮಾಡಿದ್ದಾರೆ.

ಈ ಹಿಂದೆ, ತೈವಾನ್ ವ್ಯಕ್ತಿ ಒಂದೇ ಮಹಿಳೆಯನ್ನು ನಾಲ್ಕು ಬಾರಿ ವಿವಾಹವಾಗಿದ್ದ. ಇದಕ್ಕಾಗಿ 37 ದಿನಗಳಲ್ಲಿ ಮೂರು ಬಾರಿ ವಿಚ್ಛೇದನ ಪಡೆದಿದ್ದ. ಮದುವೆ ಹಿನ್ನಲೆಯಲ್ಲಿ ಬ್ಯಾಂಕ್ ಗುಮಾಸ್ತ ಪೇಡ್ ಲೀವ್ ಪಡೆದಿದ್ದ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...