ಓಲಿ ಪ್ಯಾಟರ್ಸನ್ ಎಂಬ ಅಡುಗೆ ಪ್ರಿಯನೊಬ್ಬ ತನ್ನ ಹವ್ಯಾಸದ ಭಾಗವಾಗಿ ವಿವಿಧ ಖಾದ್ಯಗಳ ಪ್ರಯೋಗ ನಡೆಸುತ್ತಿರುತ್ತಾನೆ. ಆ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಕೂಡ ವಿಡಿಯೊ ಹಂಚಿಕೊಳ್ಳುತ್ತಿರುತ್ತಾನೆ. ಆದರೆ, ಇತ್ತೀಚೆಗೆ ಆತನಿಗೆ ಹೊಳೆದ ವಿಚಿತ್ರ ಖಾದ್ಯವೆಂದರೆ ಕಲ್ಲಂಗಡಿ ಹಣ್ಣಿನ ಪಿಜ್ಜಾ…! ಹೌದು, ಇದನ್ನು ಮಾಡಿದ ಭೂಪ, ವಿಡಿಯೊವನ್ನು ಕೂಡ ಹಂಚಿಕೊಂಡುಬಿಟ್ಟ.
ರಕ್ಷಾ ಬಂಧನದಲ್ಲಿ ’ದೀದಿ ರಾಖಿ’ ಯದ್ದೇ ಸದ್ದು
ಆಸ್ಟ್ರೇಲಿಯಾದ ಡಾಮಿನೊಸ್ ಘಟಕವೊಂದಕ್ಕೆ ಈ ಖಾದ್ಯದ ತಯಾರಿಕೆ ನೋಡಿ ಇಷ್ಟವೂ ಆಯಿತು. ಅವರು ಕೂಡ ತಯಾರು ಮಾಡಿ, ಗ್ರಾಹಕರಿಗೆ ಕೊಟ್ಟಾಗ ಮಾತ್ರ ಎಲ್ಲವೂ ಉಲ್ಟಾ ಆಯಿತು. ಗ್ರಾಹಕರು ಖಾದ್ಯವನ್ನು ದೂರ ಸರಿಸಿದರು. ಇಂಥ ಹುಚ್ಚಾಟದ ಖಾದ್ಯವೇ ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು, ಓಲಿಯ ವಿಡಿಯೊಗೆ ಕೂಡ ಕಮೆಂಟ್‍ನಲ್ಲಿ ನೆಟ್ಟಿಗರು ತಮ್ಮ ನಿರಾಕರಣೆ ವ್ಯಕ್ತಪಡಿಸಿದ್ದಾರೆ. ಇಂಥ ಪ್ರಯೋಗ ಸರಿ ಇದೆ, ಆದರೆ ಕಲ್ಲಂಗಡಿ ಪಿಜ್ಜಾ ಸಹವಾಸ ಬೇಡ ಎಂದಿದ್ದಾರೆ. ಮತ್ತೆ ಕೆಲವರು, ನಾವು ಅನಾನಸ್ ಪಿಜ್ಜಾ ಕೇಳಿದ್ದೇವೆ. ಅದಕ್ಕಿಂತ ಇದೇ ವಾಸಿ ಎಂದಿದ್ದಾರೆ.
https://www.youtube.com/watch?v=g3XdxwA2ixc
https://www.youtube.com/watch?v=Z7BsjlxC6_c