alex Certify ನೆಟ್ಟಿಗರನ್ನು ಕಂಗಾಲಾಗಿಸಿದೆ ʼರಸಗುಲ್ಲಾʼದ ಹೊಸ ಅವತಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರನ್ನು ಕಂಗಾಲಾಗಿಸಿದೆ ʼರಸಗುಲ್ಲಾʼದ ಹೊಸ ಅವತಾರ…!

ನೀವು ತಿಂಡಿಪೋತರಾಗಿದ್ದರೆ ವಿನೂತನವಾದ, ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತೀರಿ ಅಲ್ವಾ..? ಕೆಲವರು, ವಿಲಕ್ಷಣವಾದ ಖಾದ್ಯಗಳನ್ನು ತಯಾರಿಸಲು ಇಷ್ಟಪಡುತ್ತಾರೆ.

ಇದೀಗ, ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ರಸಗುಲ್ಲಾ ಚಾಟ್ ಎಂದು ಕರೆಯಲ್ಪಡುವ ವಿಲಕ್ಷಣವಾದ ಖಾದ್ಯವನ್ನು ತಯಾರಿಸಿದ್ದಾರೆ.

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡ ಆನೆ

ರಸಗುಲ್ಲಾವನ್ನು ರೊಸೊಗೊಲ್ಲಾ ಎಂದೂ ಕೂಡ ಕರೆಯುತ್ತಾರೆ. ಇದು ಪಶ್ಚಿಮ ಬಂಗಾಳದಲ್ಲಿ ಹುಟ್ಟಿಕೊಂಡ ಒಂದು ಸಿಹಿಭಕ್ಷ್ಯವಾಗಿದೆ. ಇದು ಗುಲಾಬ್ ಜಾಮೂನ್ ತರಹದ ಸಿಹಿ ಸಿರಪ್ ಖಾದ್ಯವಾಗಿದೆ. ಮತ್ತೊಂದೆಡೆ, ಚಾಟ್ ಎಂಬುದು ಆಲೂಗಡ್ಡೆ, ಸೇವು, ಮೊಸರು, ಚಟ್ನಿಗಳು ಮುಂತಾದ ವಿವಿಧ ಪದಾರ್ಥಗಳೊಂದಿಗೆ ತಯಾರಿಸಿದ ಜನಪ್ರಿಯ ಖಾರದ ತಿಂಡಿ. ಆದರೆ ಈತ, ಸಿಹಿ ಮತ್ತು ಖಾರವನ್ನು ಒಟ್ಟಿಗೆ ಸೇರಿಸಿ ಹೊಸ ಖಾದ್ಯವನ್ನು ತಯಾರಿಸಿದ್ದಾನೆ.

ಆಗಾಗ ಮಕ್ಕಳನ್ನು ಕಾಡುವ ತಲೆನೋವಿನ ಬಗ್ಗೆ ನಿರ್ಲಕ್ಷ್ಯ ಬೇಡ

ರಸಗುಲ್ಲಾ ಚಾಟ್ ಮಾಡಲು ಸಿರಪ್ ಅನ್ನು ಹಿಂಡಿ ಎರಡು ರಸಗುಲ್ಲಾಗಳನ್ನು ತೆಗೆದುಕೊಂಡಿದ್ದಾನೆ. ನಂತರ ಅದಕ್ಕೆ ಒಂದು ರೀತಿಯ ಮಸಾಲೆ ಸೇರಿಸಿದ್ದಾನೆ. ಬಳಿಕ ಹುಣಸೆ ಚಟ್ನಿ ಹಾಗೂ ಮೊಸರನ್ನು ಸೇರಿಸಿದ್ದಾನೆ. ತದನಂತರ ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿ ಮತ್ತು ಒಂದು ಚಮಚ ಹುಣಸೆ ಚಟ್ನಿಯನ್ನು ಮತ್ತೆ ಸೇರಿಸಿ, ಅದರ ಮೇಲೆ ಸ್ವಲ್ಪ ಮಸಾಲೆ ಸಿಂಪಡಿಸಿದ್ದಾನೆ.

ಈ ವಿಲಕ್ಷಣವಾದ ಖಾದ್ಯ ತಯಾರಿಸುವ ವಿಡಿಯೋವನ್ನು ಕಪ್ತನ್ ಹಿಂದೂಸ್ತಾನ್ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸುಮಾರು 72,000 ಕ್ಕಿಂತ ಹೆಚ್ಚು ಜನರು ವೀಕ್ಷಿಸಿದ್ದು, ಸಖತ್ ವೈರಲ್ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...