ಬೇಕರಿಗಳಲ್ಲಿ ದಿಲ್‍ಖುಷ್ ಸಿಹಿ ಖಾದ್ಯವನ್ನು ಬಹುಶಃ ಎಲ್ಲರೂ ಸಣ್ಣ ವಯಸ್ಸಿನಲ್ಲಿ ತಿಂದಿರುತ್ತಾರೆ. ಈಗಲೂ ಕೂಡ ಬಹಳಷ್ಟು ಜನರ ಜನಪ್ರಿಯ ಮತ್ತು ಅಗ್ಗದ ಸಿಹಿ ತಿನಿಸು ‘ದಿಲ್‍ಖುಷ್’. ಆದರೆ ದಿಲ್‍ಖುಷ್ ದೋಸೆ ಕೇಳಿದ್ದೀರಾ ?
ರಸ್ತೆ ಬದಿಯ ಗಾಡಿಯೊಂದರಲ್ಲಿ ಈರುಳ್ಳಿ, ಡ್ರೈಫ್ರೂಟ್ಸ್ ಗಳನ್ನು ತುಂಬಿದ ದಿಲ್‍ಖುಷ್ ದೋಸೆಯನ್ನು ಮಾಡಲಾಗುತ್ತಿರುವ ವಿಡಿಯೊ ಟ್ವಿಟರ್ ನಲ್ಲಿ ವೈರಲ್ ಆಗಿದೆ. 59 ಸೆಕೆಂಡ್‍ಗಳ ಈ ತುಣುಕನ್ನು ಯೂಟ್ಯೂಬರ್ ಹ್ಯಾರಿ ಉಪ್ಪಾಲ್ ಅವರು ಮೊದಲು ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.
ಕ್ರಿಕೆಟ್ ತಂಡಕ್ಕೆ ʼತಾಲಿಬಾನ್ʼ ಹೆಸರು….! ವಿರೋಧದ ಬಳಿಕ ಎಚ್ಚೆತ್ತ ಆಯೋಜಕರು
ಹಂಚಿಗೆ ದೋಸೆ ಹಾಕಿ, ಅದರ ಮೇಲೆ ಈರುಳ್ಳಿ, ಬೆಣ್ಣೆ, ಕೋಸು, ದಪ್ಪಮೆಣಸು, ಕಾಯಿ ಚಟ್ನಿ, ಪನೀರ್, ಡ್ರೈಫ್ರೂಟ್ಸ್, ಜೀರಾ ಪುಡಿ, ಗರಂ ಮಸಾಲ ಹಾಕಿ ಚೆನ್ನಾಗಿ ಬೆರೆಸಿದ ನಂತರ ದೋಸೆಯನ್ನು ಮಡಿಚಿಕೊಡುವ ಈ ವಿಡಿಯೊ ನಿಮ್ಮ ಬಾಯಲ್ಲಿ ನೀರೂರಿಸಿದರೆ ಅಚ್ಚರಿ ಇಲ್ಲ.