ಕಚೇರಿಗಳಲ್ಲಿ ಎಷ್ಟೇ ಆಪ್ತರನ್ನೂ ಕೂಡ ಏಕವಚನದಲ್ಲಿ ಕರೆಯುವುದು ಕಡಿಮೆ. ಹಾಗಿರುವಾಗ ಬ್ರಿಟನ್ ವ್ಯಕ್ತಿಯೊಬ್ಬ, ಕಚೇರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ಹನಿ, ಲವ್, ಸ್ವೀಟಿ ಎಂದೆಲ್ಲ ಕರೆದು ಯಡವಟ್ಟು ಮಾಡಿಕೊಂಡಿದ್ದಾನೆ. ಕಂಪನಿ ಕೆಲಸದಿಂದ ತೆಗೆದು ಹಾಕಿದೆ. ಕಂಪನಿ ವಿರುದ್ಧ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದಾನೆ.
ಮೈಕ್ ಹಾರ್ಟ್ಲೆ, ಹೆಸರಿನ ವ್ಯಕ್ತಿ, ಮಹಿಳಾ ಸಿಬ್ಬಂದಿಗೆ ಸ್ವೀಟಿ, ಲವ್ ಎಂದೆಲ್ಲ ಕರೆಯುತ್ತಿದ್ದನಂತೆ. ಈ ಬಗ್ಗೆ ಸಿಬ್ಬಂದಿ ದೂರು ನೀಡಿದ್ದರಂತೆ. ದೂರಿನ ನಂತ್ರ ಕಂಪನಿ, ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಿತ್ತು. ಕಂಪನಿ ವಿರುದ್ಧ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದ.
ವಿಚಾರಣೆ ವೇಳೆ ಕೋರ್ಟ್, ಕಂಪನಿ ಕ್ರಮವನ್ನು ಒಪ್ಪಿಕೊಂಡಿದೆ. ಕಚೇರಿಯಲ್ಲಿ ಮಹಿಳೆಯರನ್ನು ಸ್ವೀಟಿ, ಲವ್ ಎಂದೆಲ್ಲ ಕರೆಯುವುದು ಅವರಿಗೆ ಅವಮಾನ ಮಾಡಿದಂತೆ ಎಂದಿದೆ. ಯಾವುದೇ ಕಚೇರಿಯಲ್ಲಿ ಮಹಿಳೆಯನ್ನು ಹೀಗೆ ಕರೆಯಬಾರದೆಂದು ಎಚ್ಚರಿಕೆ ನೀಡಿದೆ. ಮಹಿಳಾ ಸಿಬ್ಬಂದಿಗೆ ಮಾತ್ರವಲ್ಲ ಪುರುಷ ಸಿಬ್ಬಂದಿಗೂ ಅಡ್ಡ ಹೆಸರಿನಿಂದ ಕರೆಯುತ್ತೇನೆ. ಅಡ್ಡ ಹೆಸರಿನ ಹಿಂದೆ ಯಾವುದೇ ದುರುದ್ದೇಶವಿಲ್ಲವೆಂದು ಆತ ಹೇಳಿದ್ದಾನೆ. ಆದ್ರೆ ಕೋರ್ಟ್, ಆತನ ಅರ್ಜಿಯನ್ನು ವಜಾಗೊಳಿಸಿದೆ. ಕಂಪನಿ ಕ್ರಮವನ್ನು ಎತ್ತಿ ಹಿಡಿದಿದೆ.