alex Certify ಲಾಟರಿಯಲ್ಲಿ ಗೆದ್ದ ಬೃಹತ್​ ಮೊತ್ತ ಖರ್ಚು ಮಾಡಲು ಯುವತಿ ಹುಡುಕಾಟದಲ್ಲಿದ್ದಾನೆ ಈತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಟರಿಯಲ್ಲಿ ಗೆದ್ದ ಬೃಹತ್​ ಮೊತ್ತ ಖರ್ಚು ಮಾಡಲು ಯುವತಿ ಹುಡುಕಾಟದಲ್ಲಿದ್ದಾನೆ ಈತ….!

ಜರ್ಮನಿ: ಲಾಟರಿಯಲ್ಲಿ ಕೋಟಿ ಕೋಟಿ ರೂಪಾಯಿ ಹೊಡೆದುಬಿಟ್ಟರೆ ಏನು ಮಾಡುತ್ತೀರಿ ? ಸಮಾಜಸೇವೆ ಮಾಡುತ್ತೇನೆ, ವಿಶ್ವ ಪರ್ಯಟನೆ ಮಾಡುತ್ತೇನೆ, ಎಫ್​ಡಿ ಇಡುತ್ತೇನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತೇನೆ…… ಹೀಗೆ ಹಲವಾರು ಕಾರಣಗಳನ್ನು ಹೇಳುವುದು ಸಹಜ. ಆದರೆ ಇಲ್ಲೊಬ್ಬ ಮಾತ್ರ ಹುಡುಗಿಯ ಹುಡುಕಾಟದಲ್ಲಿದ್ದಾನೆ!

ಹೌದು. ಅವನಿಗೆ ಮದುವೆಯಾಗಲು ಹುಡುಗಿ ಬೇಕಂತೆ. ಇದಕ್ಕೆ ಕಾರಣ ಲಾಟರಿಯಲ್ಲಿ ಗೆದ್ದಿರುವ 10 ಮಿಲಿಯನ್ ಡಾಲರ್​ (ಸುಮಾರು 82 ಕೋಟಿ ರೂಪಾಯಿ) ಖರ್ಚು ಮಾಡಲು ಅಂತೆ !

ಜರ್ಮನಿಯ ಡಾರ್ಟ್‌ಮಂಡ್‌ನ ಕುರ್ಸಾತ್ ಯಿಲ್ಡಿರಿಮ್ ಸೆಪ್ಟೆಂಬರ್ 24 ರಂದು ಈ ಬೃಹತ್​ ಮೊತ್ತದ ಲಾಟರಿ ಗೆದ್ದಿದ್ದಾನೆ. ತನಗೆ ಬೇಕಾಗಿರುವ ಎಲ್ಲಾ ಐಷಾರಾಮಿ ವಸ್ತುಗಳನ್ನೂ ಖರೀದಿಸಿದ್ದಾನೆ. ಆದರೂ ಹಣ ಮಿಕ್ಕಿದ್ದು, ಅದನ್ನು ಖರ್ಚು ಮಾಡಲು ಪತ್ನಿಯ ಹುಡುಕಾಟದಲ್ಲಿದ್ದಾನೆ !

ಟರ್ಕಿಶ್ ವಲಸಿಗರ ಮಗನಾಗಿರುವ ಕುರ್ಸಾತ್, ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಈಗ ಕೆಲಸ ಬಿಟ್ಟಿದ್ದಾನೆ. ಲಾಟರಿ ಗೆದ್ದ ಬಳಿಕ £392,000 (ರೂ. 3.65 ಕೋಟಿಗೂ ಹೆಚ್ಚು) ಫೆರಾರಿ 448 ಪಿಸ್ತಾ ಮತ್ತು ಪೋರ್ಷೆ ಟರ್ಬೊ ಎಸ್ ಕ್ಯಾಬ್ರಿಯೊಲೆಟ್ ಅನ್ನು £ 218,000 (ಸುಮಾರು ರೂ 2.03 ಕೋಟಿ) ಖರೀದಿಸಿದ್ದಾನೆ. ಮಿಕ್ಕ ಹಣ ಖರ್ಚು ಮಾಡಲು ಹುಡುಗಿ ಬೇಕೆಂದಿದ್ದಾನೆ!

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...