ಈ ಸ್ಟೋರಿ ಕೇಳಿದ್ರೆ ನೀವು ಹೌಹಾರೋದು ಖಂಡಿತಾ.. ನಿಮಗೇನಾದ್ರೂ ಮಾಜಿ/ಗೆಳತಿ ಇದ್ರೆ ಅವರಿಂದ ಬಹಳ ಹುಷಾರಾಗಿರ್ಬೇಕು. ಅದು ಯಾಕೆ ಅಂತಾ ಕೇಳ್ತೀರಾ..? ಈ ಸ್ಟೋರಿ ಓದಿ.
ಚೀನಾದಲ್ಲಿ ವ್ಯಕ್ತಿಯೊಬ್ಬ ಮಾಜಿ ಗೆಳತಿಯ ಫೋನ್ ಚೆಕ್ ಮಾಡಲು ಖತರ್ನಾಕ್ ಐಡಿಯಾ ಉಪಯೋಗಿಸಿ ಇದೀಗ ಜೈಲುಪಾಲಾಗಿದ್ದಾನೆ.
ನಿದ್ದೆಯಲ್ಲಿದ್ದ ತನ್ನ ಮಾಜಿ ಗೆಳತಿಯ ಕಣ್ಣುರೆಪ್ಪೆಗಳನ್ನು ಎತ್ತಿ, ಆಕೆಯ ಮುಖದ ಗುರುತಿಸುವಿಕೆಯನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್ ಅನ್ನು ಉಪಯೋಗಿಸಿದ್ದಾನೆ.
ಮಾಜಿ ಗೆಳತಿಯ ಮೊಬೈಲ್ ಅನ್‌ಲಾಕ್ ಮಾಡಲು ಮತ್ತು ದೊಡ್ಡ ಮೊತ್ತವನ್ನು ವರ್ಗಾಯಿಸುವ ಮೊದಲು, ಆಕೆಯ ಖಾತೆಗಳಿಗೆ ಪ್ರವೇಶ ಪಡೆಯಲು ಯುವತಿಯ ಫಿಂಗರ್‌ಪ್ರಿಂಟ್‌ಗಳನ್ನು ಬಳಸಿದ್ದಾನೆ. ಬಳಿಕ ಬರೋಬ್ಬರಿ 18 ಲಕ್ಷ ರೂ.ಗಳನ್ನು ತನ್ನ ಖಾತೆಗೆ ಸೈಲೆಂಟಾಗಿ ವರ್ಗಾಯಿಸಿದ್ದಾನೆ.
ಡಿಸೆಂಬರ್ 2020 ರಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆರೋಪಿಯನ್ನು ಹುವಾಂಗ್ ಎಂದು ಗುರುತಿಸಲಾಗಿದೆ. ಯುವತಿಗೆ ಔಷಧಿಯುಕ್ತ ಊಟ ನೀಡಿದ್ದರಿಂದ ಆಕೆ ನಿದ್ರೆಗೆ ಜಾರಿದ್ದಳು. ಹೀಗಾಗಿ ಆರೋಪಿ ಈಕೆಯ ಫಿಂಗರ್ ಪ್ರಿಂಟ್ ಗಳನ್ನು ಬಳಸಿ ಹಣವನ್ನು ಯಾಮಾರಿಸಿದ್ದಾನೆ.
ಮರುದಿನ ಬೆಳಿಗ್ಗೆ ತನ್ನ ಬ್ಯಾಂಕ್‌ನಿಂದ ದೊಡ್ಡ ವರ್ಗಾವಣೆಯ ಕುರಿತು ಸಂದೇಶವನ್ನು ಸ್ವೀಕರಿಸಿದಾಗ ಕಳ್ಳತನವಾಗಿರುವುದು ಯುವತಿ ಡಾಂಗ್‌ಳ ಗಮನಕ್ಕೆ ಬಂದಿದೆ. ಇನ್ನು ಆರೋಪಿಯು ಕದ್ದ ಹಣವನ್ನು ಜೂಜಿನ ಸಾಲಗಳನ್ನು ತೀರಿಸಲು ಬಳಸಿದ್ದಾನೆ ಎಂದು ವರದಿಯಾಗಿದೆ.
ಘಟನೆ ನಡೆದ ಕೆಲವು ತಿಂಗಳ ನಂತರ ಪೊಲೀಸರು ಹುವಾಂಗ್‌ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ತಪ್ಪಿತಸ್ಥನೆಂದು ಕಂಡು ಬಂದಿದ್ದು, ಮೂರುವರೆ ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಅಷ್ಟೇ ಅಲ್ಲದೆ 20,000 ಯುವಾನ್ ದಂಡವನ್ನು ಕೂಡ ಪಾವತಿಸಬೇಕಿದೆ.