129.5 ಕೆಜಿ ತೂಕವನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಕೆಲಸವೇನಲ್ಲ. ಆದರೆ ಕೇವಲ ಒಂದೇ ಒಂದು ಬೆರಳಿನಲ್ಲಿ ಇಷ್ಟು ತೂಕವನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವೇ ? ಒಮ್ಮೆ ಊಹಿಸಿ. ಯುಕೆ ಮೂಲದ ಕಲಾವಿದ ಸ್ಟೀವ್ ಕೀಲರ್ ಇದನ್ನು ಸಾಧಿಸಿದ್ದಾರೆ.
ತನ್ನ ಮಧ್ಯದ ಬೆರಳಿನಲ್ಲಿ 129.5 ಕೆಜಿಯನ್ನು ಎಂಟು ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳುವ ಮೂಲಕ “ಒಂದು ಬೆರಳಿನಿಂದ ಅತಿ ಹೆಚ್ಚು ಡೆಡ್ಲಿಫ್ಟ್” ಮಾಡುವ ದಾಖಲೆಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಜೂನ್ 10 ರಂದು ದಾಖಲಿಸಿಕೊಂಡಿದೆ.
ಮಾಡಿ ನೋಡಿ ರುಚಿಕರವಾದ ನುಚ್ಚಿನುಂಡೆ
ಕೆಲ್ಲರ್ ಒಬ್ಬ ಪರಿಣಿತ ಮಾರ್ಷಲ್ ಆರ್ಟಿಸ್ಟ್. ಅವರು 18 ವರ್ಷ ವಯಸ್ಸಿನಿಂದಲೂ ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ. ಸದ್ಯ 48 ವರ್ಷ ವಯಸ್ಸು. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಮತ್ತು ಜೂಡೋದಲ್ಲಿ ಮೊದಲ ಡಾನ್ ಬ್ಲ್ಯಾಕ್ ಬೆಲ್ಟ್ ಅನ್ನು ಹೊಂದಿದ್ದಾರೆ.
ಗಿನ್ನೆಸ್ ವಿಶ್ವ ದಾಖಲೆಯೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು ತನ್ನ ಈ ಸಾಧನೆಯನ್ನು ಪೋಷಕರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.