ಕೋವಿಡ್‌ನಿಂದ ಸತ್ತಿದ್ದಾರೆ ಎಂದು ನಂಬಲಾಗಿದ್ದ 27 ವರ್ಷ ವಯಸ್ಸಿನ ಟೆಕ್ಕಿಯೊಬ್ಬರ ಕೊಳೆತ ದೇಹ ಐದು ದಿನಗಳ ಬಳಿಕ ಸೂಟ್‌ಕೇಸ್ ಒಂದರಲ್ಲಿ ಸಿಕ್ಕ ಮೇಲೆ ತಿರುಪತಿ ಪೊಲೀಸರು ಆಕೆಯ ಪತಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ. ಜೊತೆಗೆ ಸಾಕ್ಷಿ ನಾಶ ಮಾಡಲು ಯತ್ನಿಸಿದ ಆರೋಪವನ್ನೂ ಸಹ ಆತನ ವಿರುದ್ಧ ಜಾರ್ಚ್‌ಶೀಟ್‌ನಲ್ಲಿ ಪೊಲೀಸರು ಹಾಕಿದ್ದಾರೆ.
ಆಪಾದಿತ ಶ್ರೀಕಾಂತ್ ರೆಡ್ಡಿ ತನ್ನ ಮಡದಿ ಭುವನೇಶ್ವರಿ ಕೋವಿಡ್‌ನಿಂದ ಮೃತಪಟ್ಟಿದ್ದಾಗಿ ಆತನ ಬಂಧುಗಳು, ಕುಟುಂಬಸ್ಥರು ಹಾಗೂ ನೆರೆಹೊರೆಯವರಿಗೆ ನಂಬಿಸಿ, ಆಸ್ಪತ್ರೆಯವರ ಮೂಲಕವೇ ಆಕೆಯ ಅಂತ್ಯಸಂಸ್ಕಾರ ನಡೆದುಹೋಗಿದೆ ಎಂದಿದ್ದ.
CBSE 10 ನೇ ತರಗತಿ ಫಲಿತಾಂಶದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಆದರೆ ಪ್ರಕರಣದ ಬೆನ್ನುಹತ್ತಿದ ಅಲಿಪಿರಿ ಪೊಲೀಸರಿಗೆ ಜೂನ್ 23ರಂದು ಸೂಟ್‌ಕೇಸ್ ಒಂದರಲ್ಲಿ 90% ಸುಟ್ಟ ಗಾಯಗಳಿಂದ ಕೂಡಿದ್ದ ಯುವತಿಯೊಬ್ಬರ ದೇಹ ಸಿಕ್ಕಿದೆ. “ದೇಹವು ಗುರುತು ಸಿಗದ ಮಟ್ಟಿಗೆ ಆಗಿದ್ದು, ವಿಧಿವಿಜ್ಞಾನ ತಂಡದ ಸಹಾಯದಿಂದ ಸತ್ತ ಮಹಿಳೆಯ ವಯಸ್ಸು 25-30 ವರ್ಷ ಇರಬಹುದು ಎಂದು ತಿಳಿದುಬಂತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಭ್ಯವಿರುವ ಎಲ್ಲ ವೈಜ್ಞಾನಿಕ ಸಾಕ್ಷ್ಯಗಳನ್ನು ಅವಲೋಕಿಸಿದ ಬಳಿಕ ಈ ದೇಹ, ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಚಿತ್ತೂರಿನ ಭುವನೇಶ್ವರಿಯದ್ದು ಎಂದು ಪೊಲೀಸರಿಗೆ ದೃಢಪಟ್ಟಿದೆ.