
ಪಾಕಿಸ್ತಾನದ ಕರಾಚಿಯಲ್ಲಿ ಟಿಕ್ ಟಾಕ್ ಮಹಿಳೆಯ ಜೀವ ತೆಗೆದಿದೆ. ಟಿಕ್ ಟಾಕ್ ಗೆ ಮಹಿಳೆ ಬಲಿಯಾಗಿದ್ದು ಬೇರೆ ಯಾರಿಂದಲೂ ಅಲ್ಲ. ಪತಿ ಆಕೆ ಹತ್ಯೆ ಮಾಡಿದ್ದಾನೆ. ಪತ್ನಿಯನ್ನು ಮಾತ್ರವಲ್ಲ ಅತ್ತೆಯನ್ನೂ ಆರೋಪಿ ಹತ್ಯೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
ಆರೋಪಿ ಇಶಾಕ್ ಪತ್ನಿ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡ್ತಿದ್ದಳು. ಆಕೆ ಟಿಕ್ ಟಾಕ್ ಗೆ ವಿಡಿಯೋ ಅಪ್ಲೋಡ್ ಮಾಡುವುದು ಹಾಗೂ ಜನರ ಜೊತೆ ಮಾತನಾಡುವುದು ಪತಿಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಅನೇಕ ಬಾರಿ ಗಲಾಟೆ ನಡೆದಿದೆ. ಆದ್ರೆ ಪತ್ನಿ ಇಶಾಕ್ ಮಾತು ಕೇಳಿರಲಿಲ್ಲವಂತೆ.
ಇಬ್ಬರ ಮಧ್ಯೆ ಗಲಾಟೆ ಹೆಚ್ಚಾಗ್ತಿದ್ದಂತೆ ಪತ್ನಿ ತವರಿಗೆ ಹೋಗಿದ್ದಳಂತೆ. ಅತ್ತೆ ಜೊತೆಯೂ ಇದೇ ವಿಚಾರಕ್ಕೆ ಇಶಾಕ್ ಗಲಾಟೆ ಮಾಡಿದ್ದನಂತೆ. ಭಾನುವಾರ ಸಂಜೆ ಪತ್ನಿ ಮನೆಗೆ ಬಂದ ಇಶಾಕ್ ಗುಂಡು ಹಾರಿಸಿದ್ದಾನೆ. ಇಶಾಕ್ ಗುಂಡಿಗೆ ಇಬ್ಬರೂ ಸಾವನ್ನಪ್ಪಿದ್ದಾರೆ.
ಪಾಕಿಸ್ತಾನದಲ್ಲಿ ಕೆಲ ದಿನಗಳ ಹಿಂದೆ ನಾಲ್ಕು ಮಂದಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಟಿಕ್ ಟಾಕ್ ಗೆ ವಿಡಿಯೋ ಅಪ್ಲೋಡ್ ಮಾಡುವುದು ಇದಕ್ಕೆ ಕಾರಣವಾಗಿತ್ತು.