ಸ್ಪೇನ್ನ ಮ್ಯಾಡ್ರಿಡ್ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಾಯಿ ಹತ್ಯೆಗೈದ ಮಗನೊಬ್ಬ ಹೆಣವನ್ನು ಬೇಯಿಸಿ ತಿಂದಿದ್ದಾನೆ. ತಾಯಿ ಹೆಣವನ್ನು ಸಾವಿರಕ್ಕೂ ಹೆಚ್ಚು ತುಂಡು ಮಾಡಿದ ವ್ಯಕ್ತಿ ಕೆಲ ತುಂಡುಗಳನ್ನು ಬೇಯಿಸಿ ತಿಂದಿದ್ದಾನೆ. ಉಳಿದ ತುಂಡುಗಳನ್ನು ಮತ್ತೆ ತಿನ್ನುವ ಉದ್ದೇಶದಿಂದ ಫ್ರಿಜ್ ನಲ್ಲಿಟ್ಟಿದ್ದಾನೆ.
ತಾಯಿ-ಮಗನ ಮಧ್ಯೆ ಹಿಂದಿನ ದಿನ ಗಲಾಟೆ ನಡೆದಿದೆ. ಮರುದಿನ ಎರಡು ಚಾಕು ತಂದ ಮಗ, ತಾಯಿ ಹತ್ಯೆಗೈದು ದೇಹವನ್ನು ಸಣ್ಣ ತುಂಡು ಮಾಡಿದ್ದಾನೆ. ಸೂಚನೆ ಸಿಗ್ತಿದ್ದಂತೆ ದಾಳಿ ನಡೆಸಿದ ಪೊಲೀಸರಿಗೆ ಫ್ರಿಜ್ ನಲ್ಲಿಟ್ಟಿದ್ದ ಶವದ ತುಂಡುಗಳು ಸಿಕ್ಕಿವೆ. ಘಟನೆ 2019ರಲ್ಲಿಯೇ ನಡೆದಿದ್ದು, ಆರೋಪಿಗೆ ಈಗ ಶಿಕ್ಷೆ ಪ್ರಕಟವಾಗಿದೆ. ಆರೋಪಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 73 ಸಾವಿರ ಡಾಲರ್ ದಂಡ ವಿಧಿಸಲಾಗಿದೆ.
ಆರೋಪಿ ಮಾನಸಿಕ ಅಸ್ವಸ್ಥನೆಂದು ವಕೀಲರು ವಾದ ಮಂಡಿಸಿದ್ದರು. ಆದ್ರೆ ನ್ಯಾಯಾಲಯ ವಾದವನ್ನು ತಿರಸ್ಕರಿಸಿತ್ತು. ಅಪರಾಧ ಕ್ಷಮೆಗೆ ಅರ್ಹವಲ್ಲವೆಂದ ಕೋರ್ಟ್, ವಿನಾಯಿತಿ ನೀಡಲು ನಿರಾಕರಿಸಿದೆ.