ನಾಜಿ ಸಮವಸ್ತ್ರವನ್ನು ಧರಿಸಿ ಕೆಫೆಗೆ ಕಾಲಿಟ್ಟ ವ್ಯಕ್ತಿಯೊಬ್ಬನನ್ನು ಅಲ್ಲಿಂದ ಹೊರಕ್ಕೆ ಗಳಿಸಿರುವ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. ಬಟ್ಟೆಯ ಮೇಲೆ ನಾಜಿಸಂನ ಸಂಕೇತವಾಗಿರುವ ಸ್ವಸ್ತಿಕ ಬ್ಯಾಂಡ್ ಇರುವ ಬಟ್ಟೆ ಧರಿಸಿ ವ್ಯಕ್ತಿಯೊಬ್ಬ ಕೆಫೆಗೆ ಬಂದಿದ್ದ. ಇದನ್ನು ನೋಡಿದ ಅಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಟ್ಟೆಯನ್ನು ನೋಡಿದ ಇತರ ಗ್ರಾಹಕರಿಂದ ಅಸಮಾಧಾನ ಉಂಟಾಗಿದೆ. ಅವರು ಇದನ್ನು ಚರ್ಚಿಸುತ್ತಲೇ ಕೆಫೆಯ ಸಿಬ್ಬಂದಿ ಬಂದು ಆ ವ್ಯಕ್ತಿಯನ್ನು ಹೊರಗೆ ಕಳಿಸಿದ್ದು, ಇದರ ವಿಡಿಯೋ ವೈರಲ್ ಆಗಿದೆ. ತನ್ನ ಪಾಲಕರ ಜತೆ ಬಂದಿದ್ದ ಯುವಕನನ್ನು ಕಂಡೊಡನೆ ಅಲ್ಲಿದ್ದವರು ಅಸಮಾಧಾನ ವ್ಯಕ್ತಪಡಿಸಿದ್ದು ಹಾಗೂ ಕೆಫೆಯ ಸಿಬ್ಬಂದಿ ಆತನಿಗೆ ಸೇವೆಯನ್ನು ಒದಗಿಸದೇ ಇದ್ದುದನ್ನು ವಿಡಿಯೋದಲ್ಲಿ ಕಾಣಬಹುದು.
ಅಷ್ಟಕ್ಕೂ ಇಲ್ಲಿ ಹ್ಯಾಲೋವೀನ್ ಪಾರ್ಟಿ ನಡೆಯುತ್ತಿತ್ತು. ಸಾಮಾನ್ಯವಾಗಿ ಇಂಥ ಪಾರ್ಟಿಗಳಲ್ಲಿ ಜನರು ತಮ್ಮ ಇಷ್ಟದ ಬಟ್ಟೆಗಳನ್ನು ಧರಿಸಬಹುದು. ಅದೇ ಕಾರಣಕ್ಕೆ ಈ ಯುವಕ ಕೂಡ ಇಂಥ ಸಮವಸ್ತ್ರ ಧರಿಸಿ ಬಂದಿದ್ದ. 1945 ರ ರವರೆಗೆ ಜರ್ಮನಿಯಲ್ಲಿ ಅಸ್ತಿತ್ವದಲ್ಲಿದ್ದ ರಾಜಕೀಯ ಪಕ್ಷ ನಾಜಿ. ‘ರಾಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಾರ್ಟಿ’ ಎಂಬುದು ಇದರ ಹೆಸರು. ಹಿಟ್ಲರ್ ತನ್ನನ್ನು ತಾನು ನಾಜಿಯ ಸರ್ವಾಧಿಕಾರಿಯನ್ನಾಗಿ ಸ್ಥಾಪಿಸಿಕೊಂಡಿದ್ದ. ಇದೇ ಕಾರಣಕ್ಕೆ ಅಮೆರಿಕದಲ್ಲಿ ಹೀಗೆ ನಡೆದುಕೊಳ್ಳಲಾಗಿದೆ.