ಹೆಪ್ಪುಗಟ್ಟಿದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಗೆ ವ್ಯಕ್ತಿಯೊಬ್ಬರು ಹಿಂದೆ ಮುಂದೆ ನೋಡದೇ ಧುಮುಕಿದ ಘಟನೆ ಅಮೆರಿಕದ ಕೊಲರಾಡೋದ ಸೊಲಾನ್ ಕೆರೆಯಲ್ಲಿ ಜರುಗಿದೆ.
ಲೋಕಿ ಎಂಬ ಹಸ್ಕೀ ಶ್ವಾನವನ್ನು ರಕ್ಷಿಸಲು ಜೇಸನ್ ಸ್ಕಿಡ್ಗೆಲ್ ಹೆಸರಿನ ಈ ವ್ಯಕ್ತಿ ತನ್ನ ಸುರಕ್ಷತೆಯನ್ನೂ ಲೆಕ್ಕಿಸದೇ ಮುಂದಾದ ಈ ಘಟನೆಯ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹೋಲಿ ಮಾರ್ಫ್ಯೂ ಹೆಸರಿನ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ಬಾತುಕೋಳಿಗಳನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ ನಾಯಿ ಹೀಗೆ ಕೆರೆಯಲ್ಲಿ ಸಿಲುಕಿಕೊಂಡಿದೆ ಎಂದು ಹೋಲಿ ವಿವರಿಸಿದ್ದಾರೆ.