ಚೀನಾದ ಹೆನಾನ್ ಪ್ರಾಂತ್ಯದ ಹೈಕೌ(58) ಅವರು ನಿದ್ದೆ ಮಾಡುವಾಗ ಮೂಗಿನೊಳಗೆ ಜಿರಳೆ ಹೊಕ್ಕಿದೆ. ಉಸಿರೆಳೆದುಕೊಂಡ ವೇಳೆ ಅದು ಒಳಗೆ ಸೇರಿದ್ದು, ಮೂರು ದಿನಗಳವರೆಗೆ ಅವರು ತೀವ್ರ ಅಸ್ವಸ್ಥತೆ ಅನುಭವಿಸಿದ್ದಾರೆ.
ಹೈಕೌ ಅವರ CT ಸ್ಕ್ಯಾನ್ ವರದಿಗಳಲ್ಲಿ ಕೀಟವು ಅವನ ಶ್ವಾಸನಾಳದಲ್ಲಿ ಸಿಲುಕಿಕೊಂಡಿದೆ. ಶ್ವಾಸನಾಳದೊಳಗೆ ಛಿದ್ರಗೊಳ್ಳಲು ಪ್ರಾರಂಭಿಸಿದೆ ಎಂದು ಗೊತ್ತಾಗಿದೆ.
ಆಡಿಟಿ ಸೆಂಟ್ರಲ್‌ನಲ್ಲಿನ ವರದಿಯ ಪ್ರಕಾರ, ಹೈಕೌ ತನ್ನ ಮೂಗಿನಲ್ಲಿ ಏನೋ ತೆವಳುತ್ತಿರುವಂತೆ ಮತ್ತು ಅವನ ಗಂಟಲಿನ ಕೆಳಗೆ ಚಲಿಸುತ್ತಿರುವಂತೆ ಅನುಭವವಾಗಿದೆ. ಇದರ ಬಗ್ಗೆ ಅರಿವಿಲ್ಲದ ಹೈಕೌ ಗೆ ಉಸಿರಾಟದ ಗಾಳಿ ದುರ್ವಾಸನೆಯಾಗುತ್ತಿರುವುದು ಗೊತ್ತಾಗಿದೆ. ಕೆಮ್ಮು, ಕಫ ಕಾಣಿಸಿಕೊಂಡು ಮೂರು ದಿನಗಳ ನಂತರ ಅವರು ವೈದ್ಯರ ಭೇಟಿಯಾಗಿದ್ದಾರೆ. ಹೈನಾನ್ ಆಸ್ಪತ್ರೆಯಲ್ಲಿ ಇಎನ್ಟಿ ತಜ್ಞರನ್ನು ಭೇಟಿ ಮಾಡಿದ್ದಾರೆ. ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿ ಏನೂ ಪತ್ತೆಯಾಗಿಲ್ಲ. ಏನೋ ತಪ್ಪಾಗಿದೆ ಎಂದು ಖಚಿತವಾಗಿ ಎದೆಯ CT ಸ್ಕ್ಯಾನ್ ನಡೆಸಿದ ಉಸಿರಾಟ ಮತ್ತು ಕ್ರಿಟಿಕಲ್ ಕೇರ್ ವೈದ್ಯ ಡಾ. ಲಿನ್ ಲಿಯಾಂಗ್ ಅವರನ್ನು ಹೈಕೌ ಭೇಟಿ ಮಾಡಿದ್ದಾರೆ.
ಡಾ. ಲಿಯಾಂಗ್ ಅವರು ನಿರಂತರ ಪರಿಶೀಲನೆ, ತಪಾಸಣೆ ನಡೆಸಿ ಹೈಕೌನ ಶ್ವಾಸನಾಳದಲ್ಲಿ ರೆಕ್ಕೆಗಳಿರುವ ಕೀಟ ಇರುವುದು ಗೊತ್ತಾಗಿದೆ. ಕಫ ತೆಗೆದ ನಂತರ ಸ್ಪಷ್ಟವಾಗಿ ಜಿರಳೆ ಕಾಣಿಸಿಕೊಂಡಿದೆ.
ಡಾ. ಲಿಯಾಂಗ್ ಇತರೆ ವೈದ್ಯರ ತಂಡ ಬ್ರಾಂಕೋಸ್ಕೋಪಿ ಮೂಲಕ ಜಿರಳೆ ತೆಗೆದಿದೆ. ಶಸ್ತ್ರಚಿಕಿತ್ಸೆಯ ನಂತರ, ರೋಗಿಯು ವಿಶ್ರಾಂತಿ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕೆಮ್ಮು ಮತ್ತು ಹಳದಿ ಕಫ ಕಡಿಮೆಯಾಗಿದೆ. ಇನ್ನೂ ಸ್ವಲ್ಪ ವಾಸನೆ ಇದೆ ಎಂದು ಹೇಳಿದ್ದಾಗಿ ಡಾ. ಲಿಯಾಂಗ್ ತಿಳಿಸಿದ್ದಾರೆ.
2023 ರಲ್ಲಿ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ 22 ವರ್ಷದ ವ್ಯಕ್ತಿಯೊಬ್ಬರು ನೀರು ಕುಡಿಯುವಾಗ ಆಕಸ್ಮಿಕವಾಗಿ ಜೇನುನೊಣವನ್ನು ನುಂಗಿ ಸಾವನ್ನಪ್ಪಿದ್ದರು. ಆ ವ್ಯಕ್ತಿಯ ನಾಲಿಗೆ ಮತ್ತು ಆಹಾರ ಪೈಪ್‌ನಲ್ಲಿ ಕೀಟವು ಕುಟುಕಿತ್ತು ಎಂದು ಹೇಳಲಾಗಿದೆ.