ಸದ್ಯ ಅಮೆರಿಕದಲ್ಲಿ ವಾಸಿಸುತ್ತಿರುವ ಹೈದರಾಬಾದ್ ನಿವಾಸಿಯೊಬ್ಬರು ನಗರದ ಕುಕಟ್ಪಲ್ಲಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿರುವ ತಮ್ಮ ಮನೆಗೆ ಕಳ್ಳರು ನುಗ್ಗಿರುವ ಅಲರ್ಟ್ ತಮ್ಮ ಮೊಬೈಲ್‌ಗೆ ಬರುತ್ತಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಕಳ್ಳರನ್ನು ಸೆರೆ ಹಿಡಿಯುವಂತೆ ಮಾಡಿದ್ದಾರೆ.
ಮನೆಗೆ ಅಳವಡಿಸಲಾಗಿದ್ದ ಹೈ-ಟೆಕ್ ಭದ್ರತಾ ವ್ಯವಸ್ಥೆಯ ಮೂಲಕ ಕಳ್ಳರು ಮನೆಗೆ ನುಗ್ಗಿರುವ ವಿಚಾರ ತಿಳಿದುಕೊಂಡ ಮನೆಯ ಮಾಲೀಕ ಸಮಯ ಪ್ರಜ್ಞೆ ಮೆರೆದು ಕಳ್ಳತನ ತಪ್ಪಿಸಿದ್ದಾರೆ. ಈತನ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾಗಳಿಗೆ ಮೋಷನ್ ಸೆನ್ಸಾರ್‌ಗಳನ್ನು ಅಳವಡಿಸಲಾಗಿದ್ದು, ತನ್ನ ಮನೆಗೆ ನುಗ್ಗಿದ ಕಳ್ಳನನ್ನು ತಮ್ಮ ಮೊಬೈಲ್‌ನಲ್ಲಿ ಕಂಡುಕೊಂಡಿದ್ದಾರೆ.
ಶೇನ್ ವಾರ್ನ್‌ಗೆ ಭಾವಪೂರ್ಣ ಬೀಳ್ಕೊಡುಗೆ ನೀಡಲು ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಸಜ್ಜು…!
ಬುಧವಾರ ಬೆಳಿಗ್ಗೆ 3 ಗಂಟೆಯ ವೇಳೆ ಅಮೆರಿಕದಲ್ಲಿದ್ದ ಅವರ ಮೊಬೈಲ್‌ಗೆ ಅಲರ್ಟ್ ರವಾನೆಯಾಗಿದೆ. ಇದಾದ ಬೆನ್ನಿಗೆ ವಿಡಿಯೋ ಫೂಟೇಜ್ ವೀಕ್ಷಿಸಿದ ಈತ ತನ್ನ ಮನೆಯೊಳಗೆ ಅಪರಿಚಿತನೊಬ್ಬ ಅಡ್ಡಾಡುತ್ತಿರುವುದನ್ನು ಕಂಡು ಶಾಕ್ ಆಗಿದ್ದಾರೆ.
ಕೂಡಲೇ ತಮ್ಮ ಫೋನ್ ಮೂಲಕ ನೆರೆಹೊರೆಯ ಮಂದಿಯನ್ನು ಅಲರ್ಟ್ ಮಾಡಿದ ಮನೆಯ ಮಾಲೀಕ, ಅವರ ಮೂಲಕ ವಿಚಾರವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಓಡಿ ಬಂದ ಪೊಲೀಸರು, ಮನೆಯ ಬೆಡ್‌ರೂಂನಲ್ಲಿ ಅವಿತಿದ್ದ ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ.
ಸಿನೆಮಾ ಶೂಟಿಂಗ್‌ನಲ್ಲಿ ಸಹಾಯಕನಾಗಿ ಕೆಲಸ ಮಾಡುವ ಟಿ. ರಾಮಕೃಷ್ಣ ಎಂಬಾತ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಈತ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.