ಒಂದೂವರೆ ವರ್ಷದ ತನ್ನ ಮಗಳು ದೈತ್ಯ ಜೇಡದೊಂದಿಗೆ ಆಟವಾಡುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬರು ಅಕ್ಷರಶಃ ಬೆಚ್ಚಿಬಿದ್ದಿರುವ ವಿಡಿಯೋ ವೈರಲ್ ಆಗಿದೆ.
ಅರಿಜ಼ೋನಾದ ಟಕ್ಸನ್ನವರಾದ ಡೇವಿಡ್ ಲೆಹ್ಮನ್ ತಮ್ಮ ಮನೆಯ ಪೂಲ್ಸೈಡ್ನಲ್ಲಿ ವಿಶ್ರಮಿಸುತ್ತಿದ್ದ ವೇಳೆ ಕಾಫಿ ಟಿನ್ ಒಂದರಲ್ಲಿ ಕಂಡು ಬಂದ ಟರಾಂಟುಲಾದ ಜೊತೆಗೆ ಮಗಳು ಆಡುತ್ತಿರುವುದನ್ನು ಕಂಡಿದ್ದಾರೆ. ಈ ಸಂದರ್ಭವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
BIG NEWS: ಸೆನ್ಸೆಕ್ಸ್ ಮತ್ತೊಂದು ದಾಖಲೆ; 60,333 ಕ್ಕೆ ತಲುಪಿದ ಮಾರ್ಕೆಟ್ ಸ್ಕೇಲ್
’ಮಗಳೇ ಏನು ಮಾಡುತ್ತಿದ್ದೀಯ?’ ಎಂದು ಕೇಳಿದಾಗ ಬ್ಲೇಕ್ ಮುದ್ದು ಮುದ್ದಾಗಿ “ಬಗ್ ! ಬಗ್” ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಪರಿಸ್ಥಿತಿಯನ್ನು ನಿಭಾಯಿಸುವ ವೇಳೆ ಮೊದಲು ಗಾಬರಿಗೊಳ್ಳುವ ತಂದೆ ಹಂತಹಂತವಾಗಿ ಸಮಾಧಾನಗೊಂಡು ಮಗಳನ್ನು ಸಂತೈಸುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಪಟ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.