ಸಾಮಾಜಿಕ ಜಾಲತಾಣಗಳು ಎಷ್ಟು ವಿಷಯ ತಿಳುವಳಿಕೆಗೆ ಸಹಕಾರಿಯೋ, ಅಷ್ಟೇ ಗೀಳು ಹೆಚ್ಚಿಸುವ ನಶೆಗಳಿದ್ದಂತೆ. ಅದರಲ್ಲೂ ಫೇಸ್‌ಬುಕ್ ಎಂಬ ಮಾಯಾಲೋಕದಲ್ಲಿ ದಿನಗಟ್ಟಲೇ ಮುಳುಗಿರುವ ಜನರು ನಾವು, ನೀವು ಹಾಗೂ ಸುತ್ತಲಿನವರು ಕೂಡ.
ಇಂಥ ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್, ಇನ್‌ಸ್ಟಾಗ್ರಾಂಗಳನ್ನು ಪದೇಪದೆ ತೆರೆದು ನೋಡಿ ಹೊಸದೇನಾದರೂ ಇದೆಯೇ ಎಂದು ಇಣುಕು ಚಟ ಭಾರತದಲ್ಲಿ ಕೋಟ್ಯಂತರ ಜನರಿಗಿದೆ. ಇದೊಂದು ದೊಡ್ಡ ಚಟವಾಗಿಯೇ ಹೋಗಿದೆ. ಮನೆಯಲ್ಲಿ ತಂದೆ-ತಾಯಿ, ಬೆಳೆದ ಮಕ್ಕಳು ಎಲ್ಲರೂ ಕೈನಲ್ಲಿ ತಮ್ಮ ಫೋನ್ ಹಿಡಿದು ನೋಡುತ್ತಲೇ ಕೂರುವುದು ಫೇಸ್‌ಬುಕ್ ಎಂಬ ಮುಗಿಯದ ದೊಡ್ಡ ಧಾರಾವಾಹಿ!
ಹೌದು, ಇಂಥ ಗೀಳಿನಿಂದ ಪಾರಾಗಲು ಮನೀಶ್ ಸೇಠಿ ಎಂಬ ಮಹಾಶಯ ಯುವತಿಯೊಬ್ಬಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾನೆ. ಈತ ಫೇಸ್ ಬುಕ್ ಓಪನ್ ಮಾಡಿದ ಕೂಡಲೇ ಯುವತಿಯು ಈತನ ಮುಖಕ್ಕೆ ಏಟು ಕೊಡುತ್ತಾಳೆ. ಇದು ಫೇಸ್‌ಬುಕ್ ನೋಡಬೇಡ, ನಿಲ್ಲಿಸು ಎಂಬ ಎಚ್ಚರಿಕೆಯಂತೆ. ಈ ಪ್ರಯೋಗ ಯಶಸ್ವಿಯಾಗಿ, ಸೇಠಿಯು ಬಹುತೇಕ ಇತರ ದೈನಂದಿನ ಕೆಲಸಗಳ ಕಡೆಗೆ ಗಮನ ಕೊಡುವುದು ಹೆಚ್ಚಾಗಿದೆಯಂತೆ ಕೂಡ.
ಗಾಯಕಿ ಹಾಡುತ್ತಿದ್ದಾಗಲೇ ನಡೆಯಿತು ಆ ಘಟನೆ….! ಹೃದಯಸ್ಪರ್ಶಿ ವಿಡಿಯೋ ಜಾಲತಾಣದಲ್ಲಿ ವೈರಲ್
ಅಂದ ಹಾಗೇ ಸೇಠಿ ಒಬ್ಬ ಕಂಪ್ಯೂಟರ್ ಪ್ರೋಗ್ರಾಮರ್. ಗಂಟೆಗೆ 8 ಡಾಲರ್ ಹಣ ನೀಡಿ, ಕಾರಾ ಎಂಬ ಯುವತಿಯನ್ನು ಅವರು ನೇಮಿಸಿಕೊಂಡಿದ್ದಾರೆ. ಇದರಿಂದಾಗಿ ಅವರ ವೃತ್ತಿ ಕೆಲಸದ ಮೇಲೆ ಶೇ. 98ರಷ್ಟು ಗಮನಹರಿಸಿ ಲಾಭ ಕೂಡ ಪಡೆಯಲು ಅವರಿಗೆ ಸಾಧ್ಯವಾಗಿದೆಯಂತೆ. ಯುವತಿಯ ಕಪಾಳಮೋಕ್ಷ ಕ್ಕೂ ಮುನ್ನ ಅವರು ಫೇಸ್ ಬುಕ್ ಅಡಿಕ್ಷನ್ ನಿಂದಾಗಿ ತಮ್ಮ ವೃತ್ತಿ ಕೆಲಸ ಮೇಲೆ ಕೇವಲ 35-40% ಮಾತ್ರ ಗಮನಹರಿಸಲು ಸಾಧ್ಯವಾಗುತ್ತಿತ್ತಂತೆ.
ಅಂದಹಾಗೇ, ಸೇಠಿ ಅವರು ಪ್ರಯೋಗಕ್ಕೆ ಟೆಸ್ಲಾ ಮಾಲೀಕ ‘ಎಲಾನ್ ಮಸ್ಕ್’ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಸೇಠಿ ತಮ್ಮ ಬ್ಲಾಗ್‌ನಲ್ಲಿ ಪ್ರಯೋಗದ ಬಗ್ಗೆ ಬರೆದುಕೊಂಡಿರುವುದಕ್ಕೆ ಎಮೋಜಿಗಳ ಮೂಲಕ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಸೇಠಿಯ ಕ್ರಿಯಾಶೀಲ ಐಡಿಯಾದಿಂದ ಮಸ್ಕ್‌ಗೆ ಹೊಟ್ಟೆಕಿಚ್ಚು ಆಗಿದೆಯಂತೆ. ಜತೆಗೆ ತಮಗೆ ಫೇಸ್ ಬುಕ್ ಗೀಳು ಬಿಡಲು ಆಗುತ್ತಿಲ್ಲ ಎಂಬ ಅಸಮಾಧಾನವೂ ಕಾಡುತ್ತಿದೆ ಎಂಬಂತೆ ಮಸ್ಕ್ ಅವರು ಬೆಂಕಿ ಸೂಸುತ್ತಿರುವ ಎಮೋಜಿಯನ್ನು ಪ್ರತಿಕ್ರಿಯೆ ಕಮೆಂಟ್‌ನಲ್ಲಿ ಹಾಕಿದ್ದಾರೆ.