ಬೆಂಗಳೂರು ಸೇರಿದಂತೆ ಕೆಲವು ಊರುಗಳಲ್ಲಿ ಸ್ವಿಗ್ಗಿ ಜೀನಿ ಸೇವೆಯನ್ನು ಸ್ಥಗಿತಗೊಳಿಸಿದೆ. ಆಹಾರ ಮಾತ್ರವಲ್ಲದೇ ದಾಖಲೆಗಳನ್ನೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯಲು ಸ್ವಿಗ್ಗಿ ಜೀನಿ ನೆರವಾಗುತ್ತಿತ್ತು. ಆದರೆ ಇದು ಸ್ಥಗಿತಗೊಂಡ ಮೇಲೆ ಹಲವರು ತುಂಬಾ ಬೇಸರ ವ್ಯಕ್ತಪಡಿಸಿದ್ದರು.
ಆದರೆ ಶಂಕರ್ ಗಣೇಶ್ ಎನ್ನುವವರು ಟ್ವಿಟರ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಅದೇನೆಂದರೆ, ಬೆಂಗಳೂರಿನಲ್ಲಿ ಸ್ವಿಗ್ಗಿ ಜೀನಿಯನ್ನು ವ್ಯಕ್ತಿಯೊಬ್ಬರು ಬಾಡಿಗೆಗೆ ಪಡೆದಿದ್ದಾರೆ ಎನ್ನುವುದು.
ಬೆಂಗಳೂರಿನ ಆಪಲ್ ಸ್ಟೋರ್‌ನಲ್ಲಿ ಈ ಸ್ವಿಗ್ಗಿ ಏಜೆಂಟ್ ಸಹಾಯವಾಣಿಯನ್ನು ಆರಂಭಿಸಿದ್ದಾರೆ. ‘ನಾವು ನಿಮಗೆ ಹೇಗೆ ಸಹಾಯ ಮಾಡಬಹುದು’ ಎಂದು ಔಪಚಾರಿಕವಾಗಿ ಪ್ರಶ್ನಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಶಂಕರ್ ಬರೆದುಕೊಂಡಿದ್ದಾರೆ.
ಆದರೆ ಇದು ನಿಜವಾದದ್ದಲ್ಲ. ಸ್ವಿಗ್ಗಿ ಜೀನ್ ಅನ್ನು ಯಾರೋ ಹ್ಯಾಕ್ ಮಾಡಿರಬಹುದು ಎಂದು ಕೆಲವು ಕಮೆಂಟಿಗರು ಹೇಳಿದ್ದರೆ, ಇನ್ನು ಕೆಲವರು ಈ ಏಜೆಂಟ್ಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ.