ಇಂಫಾಲ್: ಗುದನಾಳದೊಳಗೆ ಹಳದಿ ಲೋಹದ ಪೇಸ್ಟ್ ಇಟ್ಟುಕೊಂಡಿದ್ದ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸೋಮವಾರ ಇಂಫಾಲ್ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ.
ಸಿಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ದೆಹಲಿ ಪ್ರಯಾಣಿಕನ ಗುದನಾಳದೊಳಗೆ ಹಳದಿ ಲೋಹ ಇರುವುದನ್ನು ಗಮನಿಸಿದ್ದಾರೆ. ಸುಮಾರು 909.68 ಗ್ರಾಂ ತೂಕದ, ಅಂದಾಜು ₹ 42 ಲಕ್ಷ ಮೌಲ್ಯದ ನಾಲ್ಕು ಪ್ಯಾಕೆಟ್ ಹಳದಿ ಲೋಹದ ಪೇಸ್ಟ್ ಅನ್ನು ಪತ್ತೆ ಮಾಡಲಾಗಿದೆ.
ಹಬ್ಬದ ಋತುವಿನಲ್ಲಿ ದಾಖಲೆಯ ರಫ್ತು ಕಂಡ ಆಭರಣಗಳು
ಮೊಹಮ್ಮದ್ ಶರೀಫ್ ಎಂದು ಗುರುತಿಸಲಾಗಿರುವ ಈ ಪ್ರಯಾಣಿಕ ಕೇರಳ ಮೂಲದವನಾಗಿದ್ದು, ಮಧ್ಯಾಹ್ನ 2:40 ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಇಂಫಾಲ್ ನಿಂದ ದೆಹಲಿಗೆ ಪ್ರಯಾಣಿಸಲು ಸಜ್ಜಾಗಿದ್ದ. ಅನುಮಾನಾಸ್ಪದವಾಗಿ ಕಂಡುಬಂದಿದ್ದರಿಂದ, ಆತನನ್ನು ವಿಚಾರಣೆಗಾಗಿ ಸೆಕ್ಯುರಿಟಿ ಹೋಲ್ಡ್ ಪ್ರದೇಶದಿಂದ ಕರೆದೊಯ್ಯಲಾಯಿತು.
Big News: ಅಧ್ಯಯನದಲ್ಲಿ ಬಯಲಾಯ್ತು ಭಾರತೀಯರ ‘ಎತ್ತರ’ದ ಕುರಿತಾದ ಶಾಕಿಂಗ್ ಸಂಗತಿ
ವಿಚಾರಣೆ ವೇಳೆ ತೃಪ್ತಿಕರವಾದ ಉತ್ತರ ನೀಡದಿದ್ದರಿಂದ, ಅಧಿಕಾರಿಗಳು ಗುದದ್ವಾರದ ಎಕ್ಸ್-ರೇಗಾಗಿ ವೈದ್ಯಕೀಯ ಪರೀಕ್ಷಾ ಕೊಠಡಿಗೆ ಕರೆದೊಯ್ದಿದ್ದಾರೆ. ಈ ವೇಳೆ ಆತನ ಗುದನಾಳದೊಳಗೆ ಮರೆಮಾಚಿದ ಹಳದಿ ಲೋಹದ ವಸ್ತು ಕಂಡು ಬಂದಾಗ, ತಪ್ಪೊಪ್ಪಿಕೊಂಡಿದ್ದಾನೆ.
ಈ ಸಂಬಂಧ ಸಿಐಎಸ್‌ಎಫ್ ಮತ್ತು ಕಸ್ಟಮ್ಸ್‌ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಮುಂದಿನ ಕ್ರಮಕ್ಕಾಗಿ ಮೊಹಮ್ಮದ್ ಶರೀಫ್ ನನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ.