
ಲೇಖಕ ಪವನ್ ಕೌಶಿಕ್ ಟ್ವಿಟರ್ ನಲ್ಲಿ, “ಒಂದು ದಿನ ನಾನು ಅಮ್ಮಾಜಿ ಅವರನ್ನು ಭೇಟಿಯಾದೆ. ಅವರು ರಸ್ತೆ ಬದಿಯಲ್ಲಿ ಕುಳಿತು ಬಟಾಣಿ ಮಾರುತ್ತಿದ್ದರು. ನಾನು ಚೌಕಾಶಿ ಮಾಡದೆ ಎಲ್ಲಾ ಬಟಾಣಿಗಳನ್ನು ಖರೀದಿಸಲು ನಿರ್ಧರಿಸಿದೆ ಮತ್ತು ವಿಶ್ರಾಂತಿ ತೆಗೆದುಕೊಳ್ಳುವಂತೆ ಅವರಿಗೆ ಹೇಳಿದೆ. ಇತರರಿಗೆ ಸಹಾಯ ಮಾಡುವುದು ಅದ್ಭುತ ಭಾವನೆ. ಕೆಲವರು ಅದನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಇನ್ನೂ ಕೆಲವರು ಅದನ್ನು ಪ್ರಶ್ನಿಸುತ್ತಾರೆ” ಎಂದು ಫೋಟೋಗಳೊಂದಿಗೆ ಪವನ್ ಕೌಶಿಕ್ ವಿಷಯ ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ನ ಉದ್ಯಮಿ ಹರ್ಷ್ ಗೊಯೆಂಕಾ ಅವರಿಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಷ್ ಗೊಯೆಂಕಾ, ನೀವು ಒಳ್ಳೆಯದನ್ನು ಮಾಡಿದರೆ, ಅದನ್ನು ಎಂದಿಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಬೇಡಿ – ನನ್ನ ಸಲಹೆ, ”ಎಂದು ಪ್ರತಿಕ್ರಿಯಿಸಿದ್ದಾರೆ. ಹಲವರು ಹರ್ಷ್ ಗೋಯೆಂಕಾ ಅವರ ಸಲಹೆ/ಪ್ರತಿಕ್ರಿಯೆಯನ್ನು ಮೆಚ್ಚಿಕೊಂಡಿದ್ದಾರೆ.
ಬಳಿಕ ಹರ್ಷ್ ಗೋಯೆಂಕಾ ಅವರಿಗೆ ಧನ್ಯವಾದ ಹೇಳಿರುವ ಪವನ್ ಕೌಶಿಕ್ “ಹರ್ಷ್ ಗೊಯೆಂಕಾ ಸರ್, ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ತೊಡಗಿಸುಕೊಳ್ಳುವಿಕೆ, ನಿಮ್ಮ ಮಾರ್ಗದರ್ಶನ ಮತ್ತು ಸಲಹೆಯ ಅಭಿವ್ಯಕ್ತಿಯನ್ನು ನಾವು ನಿಜವಾಗಿಯೂ ಮೆಚ್ಚುತ್ತೇವೆ. ಲಕ್ಷಾಂತರ ಜನರಂತೆ ನಾನು ಕೂಡ ನಿಮ್ಮ ದೊಡ್ಡ ಅಭಿಮಾನಿಗಳಲ್ಲಿ ಒಬ್ಬ. ನಿಮ್ಮ ಸಮಯ ನೀಡಿ ನಿಮ್ಮ ಅನುಯಾಯಿಗಳಿಗೆ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು” ಎಂದಿದ್ದಾರೆ.