ರಸ್ತೆ ದಾಟಲು ಬಾತುಕೋಳಿ ಹಾಗೂ ಅದರ ಮರಿಗಳಿಗೆ ವ್ಯಕ್ತಿಯೊಬ್ಬ ಸಹಾಯ ಮಾಡಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ, ವ್ಯಕ್ತಿಯೊಬ್ಬ ಬಾತುಕೋಳಿ ಹಾಗೂ ಅದರ ಮರಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆ ದಾಟಿಸಲು ಸಹಾಯ ಮಾಡಿದ್ದಾನೆ. ಅಪಘಾತ ತಡೆಯುವ ನಿಟ್ಟಿನಲ್ಲಿ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿ ಈ ಚಿಕ್ಕ ಕುಟುಂಬಕ್ಕೆ ಮಾನವೀಯತೆ ತೋರಿದ್ದಾನೆ. ಹೀಗಾಗಿ ಬಾತುಕೋಳಿಗಳು ರಸ್ತೆ ದಾಟುವಲ್ಲಿ ಯಶಸ್ವಿಯಾಯಿತು.
ಬೆಳಗಾವಿ ಗ್ಯಾಂಗ್ ರೇಪ್ ಪ್ರಕರಣ; ನಾಲ್ವರ ಬಂಧನ
“ಎಲ್ಲ ನಾಯಕರೂ ಕ್ಯಾಪ್ ಧರಿಸುವುದಿಲ್ಲ” ಎಂದು ವಿಡಿಯೋದಲ್ಲಿ ಬರೆಯಲಾಗಿದ್ದು, ‘ಮಾನವೀಯತೆ’ ಎಂಬ ಶೀರ್ಷಿಕೆ ನೀಡಲಾಗಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಎಂತಹ “ಮಹಾನ್ ವ್ಯಕ್ತಿ. ಮಾನವೀಯತೆ ಇನ್ನೂ ಅಸ್ತಿತ್ವದಲ್ಲಿದೆ. ಅವನಿಗೆ ಒಳ್ಳೆಯದಾಗಲಿ” ಎಂದೆಲ್ಲಾ ನೆಟ್ಟಿಗರು ಪ್ರಶಂಸಿಸಿದ್ದಾರೆ.
https://twitter.com/hopkinsBRFC21/status/1430914047721971721?ref_src=twsrc%5Etfw%7Ctwcamp%5Etweetembed%7Ctwterm%5E1430914047721971721%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-helps-ducklings-and-their-mother-cross-busy-street-in-viral-video-god-bless-him-says-twitter-1845930-2021-08-27