
ಎಲ್‌ಪಿಜಿ ಸಿಲಿಂಡರ್‌ನಲ್ಲಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸಿಲಿಂಡರ್‌ನ ಒಂದು ಸಣ್ಣ ಭಾಗವನ್ನು ಮಾತ್ರ ಚೌಕಾಕಾರದಲ್ಲಿ ಕತ್ತರಿಸಿ ದ್ವಾರ ಮಾಡಿಕೊಂಡು, ಅದರೊಳಗೆ 50 ಲೀಟರ್ ಮದ್ಯವನ್ನು ಶೇಖರಿಸಿದ್ದು, ಇದೀಗ ಪೋಲೀಸರು ಮಾಲು ಸಹಿತ ಆತನನ್ನು ವಶಕ್ಕೆ ಪಡೆದಿದ್ದಾರೆ.
ರಾಜೀನಾಮೆಗೂ ಮುನ್ನ ಬೆಂʼಬಲʼ ಪ್ರದರ್ಶಿಸಲಿದ್ದರಾ ಈಶ್ವರಪ್ಪ ?
ಈ ಘಟನೆಯು ಬಿಹಾರದ ಪಾಟ್ನಾದ ಕದಮ್ ಘಾಟ್ ಪ್ರದೇಶದ ಬಳಿ ನಡೆದಿದೆ. ಭೂಷಣ್ ರೈ ಎಂಬಾತ ಈ ಕೃತ್ಯದಲ್ಲಿ ತೊಡಗಿದ್ದ.
ಸಿಲಿಂಡರ್‌ನೊಳಗೆ ಮದ್ಯವನ್ನು ಪ್ರದರ್ಶಿಸಿದ ಪೊಲೀಸರ ವಿಡಿಯೊವನ್ನು ಟ್ವೀಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಇಂತಹ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ. ಮದ್ಯವನ್ನು ಈರುಳ್ಳಿ ಚೀಲಗಳಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿದ್ದುದನ್ನು ಪೊಲೀಸರು ಇತ್ತೀಚೆಗಷ್ಟೇ ಪತ್ತೆ ಮಾಡಿದ್ದರು.
2016 ರಲ್ಲಿ ಬಿಹಾರದಲ್ಲಿ ಮದ್ಯದ ಬಳಕೆ ನಿಷೇಧಿಸಲಾಯಿತು. ಇದರ ನಂತರ, ಹಲವಾರು ಅಕ್ರಮ ಮಾರಾಟದ ನಿದರ್ಶನಗಳು ನಡೆದಿವೆ.
https://twitter.com/niteshmisan/status/1514548286371217408?ref_src=twsrc%5Etfw%7Ctwcamp%5Etweetembed%7Ctwterm%5E1514548286371217408%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fman-held-for-hiding-50-litres-liquor-inside-lpg-cylinder-in-patna-4982881.html