72 ವರ್ಷದ ಬ್ರಿಟಿಷ್ ವೃದ್ಧನೊಬ್ಬ ಬರೋಬ್ಬರಿ 305 ದಿನಗಳ ಕಾಲ ಅಂದರೆ ಸರಿ ಸುಮಾರು 10 ತಿಂಗಳು ಕೋವಿಡ್ ಸೋಂಕಿನಿಂದ ಬಳಲಿದ್ದಾನೆ. ಈ ಪ್ರಕರಣವನ್ನ ವಿಶ್ವದ ಅತ್ಯಂತ ಸುದೀರ್ಘ ಕೊರೊನಾ ಸೋಂಕು ಎಂದು ಪರಿಗಣಿಸಲಾಗಿದೆ.
ಬ್ರಿಸ್ಟೋಲ್ನ ನಿವಾಸಿಯಾದ ಡೇವ್ ಸ್ಮಿತ್ 2020ರಲ್ಲಿ ಬ್ರಿಟನ್ನಲ್ಲಿ ಕೊರೊನಾ ಮೊದಲ ಅಲೆ ಇದ್ದ ಸಂದರ್ಭದಲ್ಲಿ ಸೋಂಕಿಗೆ ಗುರಿಯಾಗಿದ್ದರು. ಇದಾದ ಬಳಿಕ ಈ ಹತ್ತು ತಿಂಗಳಲ್ಲಿ ಅವರಿಗೆ 43 ಬಾರಿ ಪರೀಕ್ಷೆ ಮಾಡಲಾಗಿತ್ತಾದರೂ ಪ್ರತಿಬಾರಿಯೂ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿದೆ. ಇವರನ್ನ 7 ಬಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಪ್ರತಿ ಬಾರಿ ಆಸ್ಪತ್ರೆಗೆ ಬೆಡ್ನಲ್ಲಿ ಮಲಗುವ ಪರಿಸ್ಥಿತಿ ಬಂದಾಗಲು ನನಗೆ ದುಃಖವಾಗ್ತಿತ್ತು. ನಾನು ಸಾವಿನ ಬಾಗಿಲ ಬಳಿ ಮಲಗಿದ್ದೇನೆ ಎಂದೆನಿಸುತ್ತಿತ್ತು ಎಂದು ಡೇವ್ ಸ್ಮಿತ್ ಹೇಳಿದ್ದಾರೆ. ಅಂದಹಾಗೆ ಇವರ ಪತ್ನಿ ಐದು ಬಾರಿ ಪತಿಯ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದರಂತೆ..!
ನಿರುದ್ಯೋಗಿಗಳಿಗೆ GOOD NEWS: ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
2019ರಲ್ಲಿ ಲ್ಯೂಕೆಮಿಯಾ ವಿರುದ್ಧ ಹೋರಾಡಿ ಗೆದ್ದಿದ್ದ ಸ್ಮಿತ್ 2020ರ ಮಾರ್ಚ್ ತಿಂಗಳಲ್ಲಿ ಸೋಂಕಿಗೆ ಗುರಿಯಾಗಿದ್ದರು. ಆದರೆ ಏಪ್ರಿಲ್ ತಿಂಗಳವರೆಗೂ ಅವರು ಟೆಸ್ಟ್ ಮಾಡಿಸಿರಲಿಲ್ಲ. ಆದರೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗೋದು ಅನಿವಾರ್ಯವಾಯ್ತು.
ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ವೈಜ್ಞಾನಿಕ ಕಾರಣ
ಮನೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಮಾಡಲಾಯ್ತು. ಆದರೆ ಅದು ಸಾಕಾಗಲಿಲ್ಲ. ಹೀಗಾಗಿ ಜುಲೈನಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾದ್ರು. ಈ ಬಾರಿ ಮತ್ತೆ ಕೋವಿಡ್ ಪಾಸಿಟಿವ್ಗೊಳಗಾಗಿದ್ದರು. ಇದೇ ರೀತಿ 43 ಬಾರಿ ಪರೀಕ್ಷೆ ಮಾಡಿದಾಗಲೂ ಪಾಸಿಟಿವ್ ಫಲಿತಾಂಶ ಪಡೆದರು. 117 ಕೆಜಿ ಇದ್ದ ಸ್ಮಿತ್ ಕೊರೊನಾದಿಂದಾಗಿ 63 ಕೆಜಿಗೆ ಇಳಿದಿದ್ದರು.
ಕೊನೆಗೂ ಸ್ಮಿತ್ ಕೊರೊನಾ ನೆಗೆಟಿವ್ ಆಗೋದ್ರಲ್ಲಿ ಯಶಸ್ವಿಯಾದ್ರು. ಈ ಸುದ್ದಿ ಕೇಳಿ ಫುಲ್ ಖುಷ್ ಆದ ಸ್ಮಿತ್ ಪತ್ನಿಯ ಬಳಿ ಹೇಳಿ ಶ್ಯಾಂಪೇನ್ ತರಿಸುವ ಮೂಲಕ ಸಂಭ್ರಮವನ್ನಾಚರಿಸಿದ್ದಾರೆ.