
ಅದರಲ್ಲಿ ಬಿಎಂಟಿಸಿ (ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆ) ಬಸ್ ಅನ್ನು ಸ್ಥಳೀಯರು ಎಳೆದು ತಂದ ವಿಡಿಯೋ ವೈರಲ್ ಆದ ನಂತರ, ನಗರದ ರಸ್ತೆಯಿಂದ ನೇರವಾಗಿ ಬರುತ್ತಿರುವ ಮತ್ತೊಂದು ಹೃದಯಸ್ಪರ್ಶಿ ವಿಷಯ ಇಲ್ಲಿದೆ. ನಟಿ ಮತ್ತು ಮಾಜಿ ಲೋಕಸಭಾ ಸದಸ್ಯೆ ದಿವ್ಯಾ ಸ್ಪಂದನಾ ಅವರು ಜಲಾವೃತ ರಸ್ತೆಯ ಮೂಲಕ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ತನ್ನೊಂದಿಗೆ ಕರೆದೊಯ್ಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುವುದನ್ನು ನೋಡಬಹುದು. ನಾಯಿಯು ಅವರನ್ನು ಹಿಂಬಾಲಿಸಿದೆ. ಶ್ವಾನ ಹಿಂದಿನಿಂದ ಬರುತ್ತಿದೆಯೇ ಎಂದು ನೋಡುತ್ತಲೇ ಅವನು ಅದನ್ನು ಕರೆದೊಯ್ಯುತ್ತಾ ಮುಂದೆ ಸಾಗಿದ್ದಾನೆ. 10 ಸೆಕೆಂಡ್‌ಗಳ ವಿಡಿಯೋ ಕೆಲವೇ ಸಮಯದಲ್ಲಿ ವೈರಲ್ ಆಗಿದ್ದು, ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಸುಮಾರು 2,000 ವೀಕ್ಷಣೆಗಳನ್ನು ಗಳಿಸಿದೆ.
ಈ ಹೃದಯಸ್ಪರ್ಶಿ ವಿಡಿಯೋ ಹಂಚಿಕೊಳ್ಳುವ ಮುನ್ನ ಮಾಜಿ ಲೋಕಸಭಾ ಸದಸ್ಯೆ ರಮ್ಯಾ, ಪಾರ್ಕಿಂಗ್ ಸ್ಥಳದ ವಿಡಿಯೋವನ್ನು ಹಂಚಿಕೊಂಡಿದ್ದರು. ಅರ್ಧದಷ್ಟು ಅಥವಾ ಸಂಪೂರ್ಣವಾಗಿ ನೀರಿನಲ್ಲಿ ಮುಳುಗುವ ಅಂಚಿನಲ್ಲಿರುವ ಹಲವಾರು ಕಾರುಗಳ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಇದು “ನಮ್ಮ ಬೆಂಗಳೂರು” ಎಂದು ಶೀರ್ಷಿಕೆ ನೀಡಿದ್ದಾರೆ.
ಅಂದಹಾಗೆ, ಸೆಪ್ಟೆಂಬರ್ 5 ರಂದು ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿ ಕೆಸರು ನೀರಿನಿಂದಾಗಿ ಉಂಟಾದ ದೊಡ್ಡ ಕೊಳದಲ್ಲಿ ಸಿಲುಕಿದ ನಂತರ ಸ್ಥಳೀಯರು ಬಿಎಂಟಿಸಿ ಬಸ್ ಅನ್ನು ಹಗ್ಗದ ಸಹಾಯದಿಂದ ಎಳೆದಿದ್ದಾರೆ.