ಲಂಡನ್: ಒಂದೇ ಕಾಂಡದಿಂದ 839 ಚೆರ್ರಿ ಟೊಮೆಟೊಗಳನ್ನು ಬೆಳೆಯುವ ಮುಖಾಂತರ ವ್ಯಕ್ತಿಯೊಬ್ಬ ವಿಶ್ವ ದಾಖಲೆಗೆ ಪಾತ್ರನಾಗಿದ್ದಾನೆ.
ಹೌದು, ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಎಂಬ ಮಾತು ನಿಜವೆಂದು ಸಾಬೀತಾಗಿದೆ. ಬ್ರಿಟನ್ನ 43 ವರ್ಷದ ವ್ಯಕ್ತಿ ಡೌಗ್ಲಾಸ್ ಸ್ಮಿತ್ ಅವರು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ಒಂದೇ ಕಾಂಡದಿಂದ 839 ಚೆರ್ರಿ ಟೊಮೆಟೊಗಳನ್ನು ಬೆಳೆಯುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.
‘ಫ್ಯಾಮಿಲಿ ಮ್ಯಾನ್’ ಮೊದಲ ಸರಣಿ ನೆನೆಪಿಸಿದ ಮನೋಜ್ ಬಾಜಪೇಯಿಗೆ ನೆಟ್ಟಿಗರಿಂದ ಎದುರಾಯ್ತು ಈ ಪ್ರಶ್ನೆ..!
ವೃತ್ತಿಯಲ್ಲಿ ಐಟಿ ಮ್ಯಾನೇಜರ್ ಆಗಿರುವ ಸ್ಮಿತ್ ಸ್ವತಃ ಇದನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಬೀಜದ ಮುಖಾಂತರ ಟೊಮೆಟೊ ಗಿಡವನ್ನು ಬೆಳೆದಿದ್ದಾರೆ. ಈ ಕೆಲಸಕ್ಕಾಗಿ ತಮ್ಮ ಹೆಚ್ಚಿನ ಸಮಯವನ್ನು ಇಲ್ಲೇ ಕಳೆದಿದ್ದಾರೆ. ಜೊತೆಗೆ ಇದರಿಂದ ಉತ್ತಮ ಫಲಿತಾಂಶವೂ ಸಿಕ್ಕಿದೆ.
ಗಿನ್ನಿಸ್ ದಾಖಲೆಗೆ ಪರಿಶೀಲಿಸುವ ಸಲುವಾಗಿ ಟೊಮ್ಯಾಟೋ ಕೀಳುವಾಗ ಸ್ಮಿತ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನ್ನ ಜಮೀನಿನಲ್ಲಿರುವ ಟೊಮೆಟೊ ಗಿಡದ ಕಾಂಡದಿಂದ ಒಟ್ಟು 839 ಟೊಮೆಟೊಗಳನ್ನು ಕಿತ್ತಾಗ, ಅಲ್ಲಿದ್ದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಈ ಹಿಂದೆ, ಗ್ರಹಾಂ ಟಾಂಟರ್ ಅವರು ಒಂದೇ ಕಾಂಡದಿಂದ 448 ಟೊಮೆಟೊಗಳನ್ನು ಬೆಳೆಯುವ ಮೂಲಕ ದಾಖಲೆಯನ್ನು ಮಾಡಿದ್ದರು. ಇದೀಗ ಈ ದಾಖಲೆಯನ್ನು ಸ್ಮಿತ್ ಪುಡಿಗಟ್ಟಿದ್ದಾರೆ.