ದೇಶೀ ಅಮ್ಮಂದಿರು ತಮ್ಮ ಗಂಡುಮಕ್ಕಳ ಮೇಲೆ ಪ್ರೀತಿ ವ್ಯಕ್ತಪಡಿಸಲು ಕೆಲವೊಮ್ಮೆ ’ಆಕ್ರಮಣಕಾರಿ’ಯಾಗುವ ಅನೇಕ ನಿದರ್ಶನಗಳನ್ನು ನಾವು ಹಗುರವಾಗಿಯೇ ಸ್ವೀಕರಿಸಿ, ತಾಯಂದಿರ ಪ್ರೀತಿಯ ಆಳವನ್ನು ಅರ್ಥೈಸಿಕೊಳ್ಳಲು ಬಹಳ ಪ್ರಯತ್ನ ಪಡುತ್ತೇವೆ.
ಕೆಲವೊಂದು ಅಮ್ಮಂದಿರಂತೂ ತಮ್ಮ ಮಕ್ಕಳಿಗೆ ಬುದ್ಧಿ ಕಲಿಸಲು ಚಪ್ಪಲಿ, ಪೊರಕೆ ಸೇವೆಯನ್ನೆಲ್ಲಾ ಮಾಡಿದ್ದನ್ನೂ ಕಂಡಿರುತ್ತೇವೆ, ಬಹುಶಃ ನಮ್ಮಲ್ಲಿ ಅನೇಕರಿಗೆ ಈ ಸೇವೆಯ ಅನುಭವವೂ ಆಗಿಯೇ ಇರಬಹುದು. ಪ್ಯಾಲಿಸ್ತೇನಿ-ಪಾಕಿಸ್ತಾನಿ ನೆಟ್ಟಿಗ ಅನ್ವರ್ ಜಿಬಾವಿಗೆ ಇಂಥದ್ದೇ ಅನುಭವವಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಕ್ಲಿಪ್‌ನಲ್ಲಿ ಅನ್ವರ್ ವಿಮಾನ ನಿಲ್ದಾಣವೊಂದರಲ್ಲಿ ಆಗಮಿಸಿದ ವೇಳೆ ಕೈಯಲ್ಲೊಂದು ಭಿತ್ತಿ ಪತ್ರ ಹಿಡಿದುಕೊಂಡು, “ನಾವು ನಿಮ್ಮನ್ನು ಮಿಸ್ ಮಾಡಿಕೊಂಡೆವು,” ಎಂದು ಅದರ ಮೇಲೆ ಬರೆದಿದ್ದಾನೆ. ಒಂದು ಕೈಯಲ್ಲಿ ಹೂವುಗಳ ಬೊಕೆ ಹಿಡಿದ ಅನ್ವರ್ ತನ್ನ ತಾಯಿಯನ್ನು ಎದಿರು ನೋಡುತ್ತಾ ಇದ್ದ. ಆದರೆ ವಿಮಾನ ನಿಲ್ಧಾಣದಿಂದ ಹೊರ ಬಂದ ಅನ್ವರ್‌ನ ತಾಯಿ ಮಗನ ಕೈಯಲ್ಲಿದ್ದ ಭಿತ್ತಿಪತ್ರ ನೋಡಿ ಆತನಿಗೆ ಚಪ್ಪಲಿ ಸೇವೆ ಮಾಡಿದ್ದಾರೆ…!
ಈ ಫನ್ನಿ ವಿಡಿಯೋಗೆ 5.9 ದಶಲಕ್ಷ ಲೈಕ್‌ಗಳು ಸಂದಾಯವಾಗಿದ್ದು, 13 ಕೋಟಿಗೂ ಹೆಚ್ಚಿನ ವೀಕ್ಷಣೆಗಳನ್ನು ಕಂಡಿದೆ.
https://youtu.be/xf61F9hjEDI