ಲಾಟರಿ ಟಿಕೆಟ್ ಗೆಲ್ಲೋದು ಖುಷಿ ವಿಷ್ಯ. ಅದ್ರಲ್ಲೂ ಕೋಟ್ಯಾಂತರ ರೂಪಾಯಿ ಲಾಟರಿ ಬಂದಿದೆ ಅಂದ್ರೆ ಕೇಳಲೇಬೇಡಿ. ಯಾರೂ ಈ ಹಣವನ್ನು ಬಿಟ್ಟುಕೊಡೋದಿಲ್ಲ. ಅಮೆರಿಕಾದಲ್ಲಿ ವ್ಯಕ್ತಿಯೊಬ್ಬನಿಗೆ ಲಾಟರಿ ಟಿಕೆಟ್ ಹೊಡೆದಿದೆ. ಆದ್ರೆ ಆತನ ಬಳಿ ಟಿಕೆಟೇ ಇರಲಿಲ್ಲ. ಇದ್ರಿಂದ ಕಂಗಾಲಾದ ವ್ಯಕ್ತಿ ಎಲ್ಲ ಕಡೆ ಹುಡುಕಿದ್ದಾನೆ. ಕೊನೆಗೂ ಆತನಿಗೆ ಟಿಕೆಟ್ ಸಿಕ್ಕಿದ್ದು, ಅದೃಷ್ಟದ ಹಣ ಮನೆಗೆ ಬಂದಿದೆ.
ಅಯೋಯಾ ನಿವಾಸಿ ಪಾಸ್ಟರ್ ಕೆವಿನ್ ಫ್ರೇ, ಲಾಟರಿ ಟಿಕೆಟ್ ಖರೀದಿ ಮಾಡಿದ್ದಾನೆ. ನಂತ್ರ ಕಿರಾಣಿ ಅಂಗಡಿಗೆ ಹೋಗಿದ್ದಾನೆ. ಅಲ್ಲೇ ಟಿಕೆಟ್ ಮರೆತು ಬಂದಿದ್ದಾನೆ. ಮನೆಗೆ ಬಂದ ಮೇಲೆ ಸಂಜೆ ಲಾಟರಿ ಟಿಕೆಟ್ ನಂಬರ್ ಅನೌನ್ಸ್ ಆದ ಬಗ್ಗೆ ಹೇಳಿದ್ದಾನೆ. ಈ ವ್ಯಕ್ತಿ ನಾಲ್ಕು ಕೋಟಿ ತನಗೆ ಬಂದಿದೆ ಎಂಬ ಭರವಸೆಯಲ್ಲಿದ್ದ. ಇದನ್ನು ಮಗ ನಂಬಲು ಸಿದ್ಧ ಇರಲಿಲ್ಲ. ಟಿಕೆಟ್ ತೋರಿಸುವಂತೆ ಕೇಳಿದ್ದಾನೆ. ಆದ್ರೆ ಈತನ ಬಳಿ ಟಿಕೆಟ್ ಇರಲಿಲ್ಲ. ಎಲ್ಲ ಕಡೆ ಹುಡುಕಿದ್ದಲ್ಲದೆ, ಆಪ್ತರಿಗೆ ಕರೆ ಮಾಡಿ ವಿಚಾರಿಸಿದ್ದಾನೆ. ಕೊನೆಯಲ್ಲಿ ಕಿರಾಣಿ ಅಂಗಡಿ ನೆನಪಾಗಿದೆ. ತಕ್ಷಣ ಅಲ್ಲಿಗೆ ಓಡಿದ ವ್ಯಕ್ತಿ, ಅಂಗಡಿಯವನ ಬಳಿ ಟಿಕೆಟ್ ನೀಡುವಂತೆ ಕೇಳಿದ್ದಾನೆ.
ಅಂಗಡಿಯವನು ಪ್ರಾಮಾಣಿಕವಾಗಿ ಟಿಕೆಟ್ ನೀಡಿದ್ದಾನೆ. ಇದನ್ನು ಪರಿಶೀಲಿಸಿದಾಗ ಕೆವಿನ್ ನಿರೀಕ್ಷೆಯಂತೆ ಆತನಿಗೆ ಟಿಕೆಟ್ ಹೊಡೆದಿದೆ. ನಾಲ್ಕು ಕೋಟಿ ರೂಪಾಯಿ ಟಿಕೆಟ್ ಮೂಲಕ ಕೆವಿನ್ ಗೆ ಸಿಕ್ಕಿದೆ. ಕುಟುಂಬಸ್ಥರೆಲ್ಲ ಇದ್ರಿಂದ ಖುಷಿಯಾಗಿದ್ದಾರೆ. ಹಣವನ್ನು ನಿವೃತ್ತಿ ಸಮಯದಲ್ಲಿ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ ಕೆವಿನ್.