
ಸೋಶಿಯಲ್ ಮೀಡಿಯಾದಲ್ಲಿ ಕ್ಷಣಕ್ಷಣಕ್ಕೂ ರಾಶಿ ರಾಶಿ ವಿಡಿಯೋಗಳು ಅಪ್‌ಲೋಡ್ ಆಗ್ತಾನೇ ಇರುತ್ತೆ. ಅದರಲ್ಲಿ ಕೆಲವು ಎಂಟರ್‌ಟೈನ್ ಮಾಡುವಂತಹದ್ದಾಗಿದ್ದರೆ. ಇನ್ನೂ ಕೆಲವು ಮಾಹಿತಿ ಕೊಡುವಂತಹ ವಿಡಿಯೋಗಳಾಗಿರುತ್ತೆ. ಅಂತಹ ರಾಶಿ ವಿಡಿಯೋಗಳಲ್ಲಿ ಅನೇಕ ವಿಡಿಯೋಗಳು ಹೃದಯಸ್ಪರ್ಶಿಗಳಾಗಿರುತ್ತೆ. ಅಂತಹದ್ದೇ ಒಂದು ವಿಡಿಯೋವನ್ನ ಹರ್ಷ ಗೋಯೆಂಕಾ ಅವರು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.
ಪ್ರಪಂಚದ ಅನೇಕ ಜನರು ಯಾವಾಗಲು ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡಲು ಸದಾ ಮುಂದೆ ಇರುತ್ತಾರೆ. ಅವರು ತಮ್ಮ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನ ದಾನ ಮಾಡುತ್ತಲೇ ಇರುತ್ತಾರೆ. ಅದರಲ್ಲೇ ಅವರಿಗೆ ಒಂದು ಖುಷಿ, ಸಮಾಧಾನ. ಇನ್ನೂ ಕೆಲವರಿಗೆ ತಾವು ಯಾರಿಗೆ ಸಹಾಯ ಮಾಡಿದರೂ ಅದನ್ನ ತೋರಿಸಿಕೊಳ್ಳುವುದಿಲ್ಲ. ಸುಮ್ಮನೆ ಬಂದು ಸಹಾಯ ಮಾಡಿ, ತಮ್ಮ ಪಾಡಿಗೆ ತಾವು ಹೊರಟು ಹೋಗಿ ಬಿಡ್ತಾರೆ. ಹಾಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಯ ವಿಡಿಯೋ ಈಗ ವೈರಲ್ ಆಗಿದೆ.
ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿರೋ ವಿಡಿಯೋ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ರಸ್ತೆಪಕ್ಕದಲ್ಲಿ ವಾಸಿಸುವ ನಿರಾಶ್ರಿತರಿಗೆ ಆಹಾರ ವಿತರಿಸುತ್ತಿರುವ ದೃಶ್ಯ ಅದು. ಈ ವಿಡಿಯೋದಲ್ಲಿ ಎರಡು ಮುಖ್ಯವಾದ ವಿಷಯವನ್ನ ಗಮನಿಸಬಹುದಾಗಿದೆ. ಒಂದನೆಯದ್ದು ವ್ಯಕ್ತಿಯ ಸಹಾಯ ಮನೋಭಾವ. ಇನ್ನೊಂದು ಆ ನಿರ್ಗತಿಕರಿಗೆ ಸಿಕ್ಕ ಅನಿರೀಕ್ಷಿತ ಸಹಾಯದಿಂದ ಅವರಿಗೆ ಆಗುವ ಖುಷಿ. ಅದು ಅವರ ಮುಖಭಾವದಲ್ಲಿ ಗೊತ್ತಾಗುತ್ತಿತ್ತು. ಅವರಿಗೆ ಸಿಕ್ಕ ಸಹಾಯದಿಂದ ದೇವರಿಗೆ ಧನ್ಯವಾದ ಹೇಳುವ ಪರಿ ಎಂಥವರಿಗೂ ಭಾವುಕರನ್ನಾಗಿ ಮಾಡುವಂತಿದೆ.
4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನ ವೀಕ್ಷಿಸಿದ್ದು, ಸಾವಿರಾರು ಜನರು ಇದನ್ನ ಲೈಕ್ ಮಾಡಿದ್ದಾರೆ. ಇನ್ನೂ ಕೆಲವರು ವ್ಯಕ್ತಿಯ ಸಹಾಯ ಮನೋಭಾವವನ್ನ ಶ್ಲಾಘಿಸುತ್ತಿದ್ದಾರೆ. ಸಹಾಯ ಮಾಡಿದರೆ ಈ ರೀತಿ ಮಾಡಬೇಕು, ಅಂತ ಸಲಹೆಯನ್ನ ಕಮೆಂಟ್ ಬಾಕ್ಸ್‌ಲ್ಲಿ ಹಾಕಿದ್ದಾರೆ.