ದ್ವಿತೀಯ ಪಿಯುನಲ್ಲಿ ಶೇ.75 ಅಂಕ; ಮನೆ ಬಾಡಿಗೆ ನೀಡಲು ನಿರಾಕರಿಸಿದ ಮಾಲೀಕ….! 29-04-2023 5:25AM IST / No Comments / Posted In: Karnataka, Latest News, Live News ಮೆಟ್ರೋ ನಗರಗಳಲ್ಲಿ ಬಾಡಿಗೆ ಮನೆ ಸಿಗುವುದು ಕಷ್ಟ ಎಂಬ ಮಾತಿದೆ. ಮನೆ ಮಾಲೀಕರ ಹಲವಾರು ನಿಬಂಧನೆಗಳಿಗೆ ಸರಿಹೊಂದದೇ ಯುವಕರು ನಮಗೊಂದು ಬಾಡಿಗೆ ಮನೆ ಸಿಗುತ್ತಾ ಎಂದು ಭಿನ್ನ ವಿಭಿನ್ನವಾಗಿ ಪೋಸ್ಟರ್ ಹಾಕಿ, ಭಿತ್ತಿ ಪತ್ರ ಹಿಡಿದು ಮನವಿ ಮಾಡೋದು ಬೆಂಗಳೂರಲ್ಲಿ ಸಾಮಾನ್ಯವಾಗಿದೆ. ಬೆಂಗಳೂರಿನಲ್ಲಿ ಬಾಡಿಗೆಗೆ ಮನೆ ಹುಡುಕುವುದಕ್ಕಿಂತ ಐಐಟಿಗೆ ಸೇರುವುದು ಸುಲಭ ಎಂದು ಕೆಲವರು ಹೇಳುತ್ತಾರೆ. ಇದೀಗ ಮತ್ತೊಂದು ವಿಚಾರ ಹೊರಬಿದ್ದಿದ್ದು ದ್ವಿತೀಯ ಪಿಯುನಲ್ಲಿ ಕಡಿಮೆ ಅಂಕ ಗಳಿಸಿರೋದ್ರಿಂದ ಬಾಡಿಗೆ ಮನೆ ಸಿಗುವುದಿಲ್ಲ ಎಂದು ತಿರಸ್ಕರಿಸಿರುವುದು ಅಚ್ಚರಿ ಮೂಡಿಸಿದೆ. ತನ್ನ ಸೋದರ ಸಂಬಂಧಿಯನ್ನು 12 ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಕಾರಣದಿಂದ ಮನೆ ಬಾಡಿಗೆ ನೀಡಲು ಹೇಗೆ ತಿರಸ್ಕರಿಸಲಾಯಿತು ಎಂಬುದನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕಾರಣವನ್ನ ನಂಬಲಾಗದಂತಿದ್ದರೂ, ತನ್ನ ಸೋದರಸಂಬಂಧಿ ಬ್ರೋಕರ್ ಜೊತೆ ನಡೆಸಿದ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್ಶಾಟ್ಗಳನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಟ್ವಿಟರ್ ಬಳಕೆದಾರ ಶುಭ್, ಬ್ರೋಕರ್ ತನ್ನ ಸಂಬಂಧಿ ಯೋಗೀಶ್ಗೆ ತನ್ನ ಲಿಂಕ್ಡ್ ಇನ್, ಟ್ವಿಟರ್ ಪ್ರೊಫೈಲ್ಗಳು, ಅವರು ಉದ್ಯೋಗದಲ್ಲಿರುವ ಕಂಪನಿಯ ಸೇರ್ಪಡೆ ಪತ್ರ ಮತ್ತು ಆಧಾರ್ ಮತ್ತು ಪಾನ್ ಕಾರ್ಡ್ಗಳ ಹೊರತಾಗಿ 10 ನೇ ಮತ್ತು 12 ನೇ ತರಗತಿಯ ಅಂಕಪಟ್ಟಿಗಳನ್ನು ಹಂಚಿಕೊಳ್ಳಲು ಕೇಳಿದರು ಎಂಬುದನ್ನು ಹಂಚಿಕೊಂಡಿದ್ದಾರೆ. 12 ನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಮಾಲೀಕರು ಅವನನ್ನು ತಿರಸ್ಕರಿಸಿದ್ದಾರೆ ಎಂದು ಬ್ರೋಕರ್ ತಿಳಿಸಿದ್ದನ್ನ ಹೇಳಿದ್ದಾರೆ. 12ನೇ ತರಗತಿಯಲ್ಲಿ ಮಾಲೀಕರು ಶೇ.90ರಷ್ಟು ನಿರೀಕ್ಷೆ ಹೊಂದಿದ್ದು, ಶೇ.75ರಷ್ಟು ಅಂಕ ಗಳಿಸಿರೋದ್ರಿಂದ ಮನೆ ನೀಡುವುದಿಲ್ಲ ಎಂದಿರೋದು ಗೊತ್ತಾಗಿದೆ. “ಅಂಕಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ, ಆದರೆ ನೀವು ಬೆಂಗಳೂರಿನಲ್ಲಿ ಫ್ಲಾಟ್ ಪಡೆಯುತ್ತೀರೋ ಇಲ್ಲವೋ ಎಂಬುದನ್ನು ಅದು ಖಂಡಿತವಾಗಿಯೂ ನಿರ್ಧರಿಸುತ್ತದೆ” ಎಂದು ಶುಭ್ ಪೋಸ್ಟ್ ಗೆ ಶೀರ್ಷಿಕೆಯಾಗಿ ಬರೆದಿದ್ದಾರೆ. ಮನೆ ಮಾಲೀಕರು ಐಐಎಂನಿಂದ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ ಎಂದು ಶುಭ್ ಕಾಮೆಂಟ್ಗಳಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಬೆಳವಣಿಗೆ ಮನೆ ಹುಡುಕುವವರ ದುಗುಡ ಹೆಚ್ಚಿಸಿದೆ. "Marks don't decide your future, but it definitely decides whether you get a flat in banglore or not" pic.twitter.com/L0a9Sjms6d — Shubh (@kadaipaneeeer) April 27, 2023