ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ ತನ್ನ ವರ್ಕ್‌ಶಾಪ್‌ಗೆ ಭೇಟಿ ನೀಡಿದಾಗ ವ್ಯಕ್ತಿಯೊಬ್ಬರು ಶಾಕ್ ಆಗಿದ್ದಾರೆ. ತನ್ನ ಅಂಗಡಿಯಲ್ಲಿ ಮರದ ಪೀಠೋಪಕರಣಗಳ ಕೆಲಸ ಮಾಡುತ್ತಿದ್ದ ಟೋನಿ ಫ್ಲೆಮಿಂಗ್ ಗೆ, ಕ್ಯಾಸೊವರಿ ಪಕ್ಷಿಯ ಅನಿರೀಕ್ಷಿತ ಆಗಮನದಿಂದ ಒಂದು ಕ್ಷಣ ಹೃದಯಬಡಿತ ನಿಂತಂತೆ ಆಗಿದೆ.
ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್‌ಲ್ಯಾಂಡ್‌ನ ಜುಲಾಟನ್‌ನಲ್ಲಿ ಈ ಘಟನೆ ನಡೆದಿದೆ. ಕ್ಯಾಸೊವರಿಗಳನ್ನು ವಿಶ್ವದ ಅತ್ಯಂತ ಮಾರಣಾಂತಿಕ ಪಕ್ಷಿ ಎಂದು ಪರಿಗಣಿಸಲಾಗಿದೆ.
ಅವುಗಳು 1.8 ಮೀಟರ್‌ಗಳಷ್ಟು ಎತ್ತರ ಮತ್ತು 70 ಕಿಲೋಗ್ರಾಂಗಳಷ್ಟು ತೂಗಬಹುದು. ಅದರ ಉಗುರುಗಳು 10 ಸೆಂ.ಮೀ.ಗಳಷ್ಟು ಉದ್ದವಾಗಿ ಬೆಳೆಯುತ್ತವೆ. ಅಲ್ಲದೆ ಇವುಗಳು ಒದೆ ಕೊಟ್ಟರೆ, ಜೀವ ಹೋದಂತ ಅನುಭವವಾಗುತ್ತದಂತೆ.
ಅದೃಷ್ಟವಶಾತ್ ಟೋನಿಗೆ ಈ ಪಕ್ಷಿಯು ಯಾವುದೇ ಅಪಾಯವನ್ನುಂಟು ಮಾಡಿಲ್ಲ. ಆರಂಭದಲ್ಲಿ ಆತಂಕಗೊಂಡರೂ ಬಳಿಕ ಏನು ಮಾಡುವುದಿಲ್ಲ ಎಂದು ಟೋನಿ ನೆಮ್ಮದಿಯಿಂದಿದ್ದ. ಟೋನಿಯ ಸ್ನೇಹಿತರು ಕ್ಯಾಸೊವರಿಯ ಫೋಟೋ ಕ್ಲಿಕ್ಕಿಸಿದ್ದಾರೆ.
ಇದೀಗ ಹಕ್ಕಿಯು ಪಟ್ಟಣದಲ್ಲಿ ಚಿರಪರಿಚಿತವಾಗಿದೆ. ಒಮ್ಮೆ ಸ್ಥಳೀಯ ಪಬ್‌ಗೆ ಕೂಡ ಹೋಗಿದ್ಯಂತೆ. ಈ ಹಕ್ಕಿಗೆ ರೊಂಪರ್ ಸ್ಟಾಂಪರ್ ಎಂದು ಅಡ್ಡಹೆಸರು ಇಡಲಾಗಿದೆ. ಆದರೆ, ಕ್ಯಾಸೊವರಿ ಪಕ್ಷಿಯು ಕೆಲವು ವ್ಯಕ್ತಿಗಳ ಜೊತೆ ಮಾತ್ರ ಬೆರೆತಿದೆ. ಸ್ಥಳೀಯ ಪಬ್‌ನಲ್ಲಿ ವ್ಯಕ್ತಿಯೊಬ್ಬನ ಮೇಲೆ ಇದು ದಾಳಿ ಮಾಡಿದ್ಯಂತೆ. ಅದೃಷ್ಟವಶಾತ್ ಆತ ಬದುಕುಳಿದಿದ್ದಾನೆ ಎಂದು ಟೋನಿ ಹೇಳಿದ್ದಾನೆ.