alex Certify ಯುವಕನ ಕಿಬ್ಬೊಟ್ಟೆ ಎಕ್ಸ್‌ – ರೇ ನೋಡಿ ದಂಗಾದ ವೈದ್ಯರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನ ಕಿಬ್ಬೊಟ್ಟೆ ಎಕ್ಸ್‌ – ರೇ ನೋಡಿ ದಂಗಾದ ವೈದ್ಯರು…..!

ಇರಾನಿನ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಸಿಲುಕಿದ್ದ 8-ಇಂಚಿನ ಡಿಯೋಡರೆಂಟ್‌ ಅನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆಯಲಾಗಿದೆ. ಗುದನಾಳದಲ್ಲಿ ಈ ಕ್ಯಾನ್‌ ಅನ್ನು ಸಿಕ್ಕಿಸಿಕೊಂಡ ವೇಳೆ ಅದು ಆತನ ಹೊಟ್ಟೆಯೊಳಗೆ ಹೋಗಿ ಸೇರಿಕೊಂಡಿದೆ.

ಕಿಬ್ಬೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡ ಬೆನ್ನಿಗೆ ಈತನನ್ನು ಟೆಹ್ರಾನ್ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊದಲಿಗೆ ಈತ ತಾನು ಏನು ಮಾಡಿದ್ದಾನೆ ಎಂದು ಹೇಳಲು ಹಿಂಜರಿದ ಕಾರಣ ಎಕ್ಸ್-ರೇ ಮಾಡಿದ ವೈದ್ಯರು ಆತನ ಹೊಟ್ಟೆಯಲ್ಲಿ ಡಿಯೋಡರೆಂಟ್ ಕ್ಯಾನ್ ಇರುವುದನ್ನು ಪತ್ತೆ ಮಾಡಿದ್ದಾರೆ.

ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಈತನನ್ನು ಬಳಿಕ ವೈದ್ಯರು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...