ಈ ಪಾರ್ಕಿಂಗ್ ಅನ್ನೋದು ನೆರೆಹೊರೆಯವರ ನಡುವೆ ಜಗಳ ತಂದೊಡ್ಡುವ ಒಂದು ವಿಷಯವಾಗಿದೆ. ಕೆಲವು ನಿವಾಸಿಗಳು ತಮ್ಮ ವಾಹನಗಳಿಗೆ ಪಾರ್ಕಿಂಗ್ ಮಾಡಲು ಆಯಕಟ್ಟಿನ ಜಾಗ ಪಡೆಯಲು ಜಗಳಕ್ಕೂ ಮುಂದಾಗುತ್ತಾರೆ.
ಒಬ್ಬ ವ್ಯಕ್ತಿ ತನ್ನ ನೆರೆಹೊರೆಯವರು ಪಾರ್ಕಿಂಗ್ ಸ್ಥಳದ ವಿಷಯದಲ್ಲಿ “ಹಾಸ್ಯದ ಸರಕಾಗಿದ್ದಾರೆ” ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಕೋವಿಡ್ ಸೋಂಕಿತರಿಗೆ ಜಪಾನ್ ಸರ್ಕಾರ ನೀಡುವ ಅಗತ್ಯ ಸಾಮಗ್ರಿ ಕಂಡು ನೆಟ್ಟಿಗರಿಗೆ ಅಚ್ಚರಿ..!
“ಉಪನಗರದಂಥ ಪ್ರದೇಶದಲ್ಲಿ” ಸ್ನೇಹಿತನೊಂದಿಗೆ ಮನೆಗೆ ತೆರಳಿದ ಅವರು ಅಲ್ಲಿ ತಮಗೆ ಆದ ಅನುಭವ ವಿವರಿಸಿದ್ದಾರೆ. ಯಾರೊಬ್ಬರೂ ಪಾರ್ಕಿಂಗ್ ಮಾಡುತ್ತಿಲ್ಲ ಎಂದು ತೋರುತ್ತಿದ್ದಂತೆ ಅವನು ತನ್ನ ಕಾರನ್ನು ಮನೆಯ ಹೊರಗೆ ನಿಲ್ಲಿಸಲು ಪ್ರಾರಂಭಿಸಿದನು. ಈ ವೇಳೆ, ಅಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ ಎಂದು ಅವರ ರೂಮ್‌ಮೇಟ್ ಹೇಳಿದ್ದಾರೆ.
“ನನ್ನ ನೆರೆಹೊರೆಯವರು ಆ ಸ್ಥಳದಲ್ಲಿ ವಾಹನ ನಿಲ್ಲಿಸುವುದನ್ನು ನಾನು ಗಮನಿಸುತ್ತೇನೆ ಮತ್ತು ನಾನು ಹೋದಾಗ ಅದರಲ್ಲಿ ನನ್ನ ವಾಹನ ನಿಲುಗಡೆ ಮಾಡುವುದು ಸಮಸ್ಯೆಯೇನಲ್ಲ,” ಎಂದು ಈತ ಹೇಳಿಕೊಂಡಿದ್ದಾರೆ.
ಪಾರ್ಕಿಂಗ್ ಮಾಡಿದವರು ಹೋದಾಗ ನೆರೆಹೊರೆಯವರು ಪಾರ್ಕಿಂಗ್ ಸ್ಥಳದಲ್ಲಿ ಕುರ್ಚಿಯನ್ನು ಹಾಕಲು ಪ್ರಾರಂಭಿಸಿದಾಗ ಸಮಸ್ಯೆ ಪ್ರಾರಂಭವಾಯಿತು ಎಂದು ಈತ ತಿಳಿಸಿದ್ದು, “ಮೂಲತಃ ಇದು ನನ್ನನ್ನು ಆ ಸ್ಥಳಕ್ಕೆ ಪ್ರವೇಶಿಸುವುದನ್ನು ನಿಷೇಧಿಸುವ ಉದ್ದೇಶವಾಗಿದೆ,” ಎಂದಿದ್ದಾರೆ.
ನೆರೆಹೊರೆಯಾತನಿಗೆ ಆತ “ನನಗೆ ಸಾಧ್ಯವಾಗದ್ದು ಬೇರಾರಿಗೂ ಸಾಧ್ಯವಾಗಕೂಡದು,” ಎಂಬ ಮನಸ್ಥಿತಿ ಹೊಂದಿರುವುದಾಗಿ ತಾನು ಹೇಳಿದಾಗ ಸಿಟ್ಟು ಮಾಡಿಕೊಂಡಿದ್ದಾನೆ.
ಹೀಗೆ ಮಾಡೋದು ಹಾಸ್ಯಾಸ್ಪದವಲ್ಲವೇ ಎಂದು ರೆಡ್ಡಿಟ್ ಬಳಕೆದಾರರು ಹಂಚಿಕೊಂಡಿರುವ ಪೋಸ್ಟ್‌ಗೆ ಭಾರೀ ವಿನೋದಮಯವಾಗಿ ಪ್ರತಿಕ್ರಿಯೆಗಳು ಬಂದಿವೆ.