ಭದ್ರತಾ ಅಧಿಕಾರಿಯಂತೆ ನಟಿಸಿ ತನ್ನ ಮಗನನ್ನು ಬಿಡಿಸಲು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಮುಂಬೈ ನಿವಾಸಿಯನ್ನು ಬಂಧಿಸಲಾಗಿದೆ. ಈತನನ್ನು ಉದ್ಯಮಿ ಮತ್ತು ವಿಪಿ ರಸ್ತೆ ಪ್ರದೇಶದ ನಿವಾಸಿ ಚಿಂತನ್ ಗಾಂಧಿ ಎಂದು ಗುರುತಿಸಲಾಗಿದೆ.
ಸಿಐಎಸ್‌ಎಫ್‌ನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಮ್‌ಕುಮಾರ್ ಅವರ ಹೆಸರಿನಲ್ಲಿ ನಕಲಿ ಕಾರ್ಡ್ ಮಾಡಿಸಿ ನಿಲ್ದಾಣ ಪ್ರವೇಶಿಸಲು ಬಯಸಿದ್ದ ಈತ. ಸಿಐಎಸ್‌ಎಫ್‌ನ ಇನ್ಸ್‌ಪೆಕ್ಟರ್ ಅವಿನಾಶ್ ರಂಜನ್ ಬಳಿ ಕರೆದೊಯ್ದ ಬಳಿಕ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಆಶ್ಚರ್ಯಕರ ಸಂಗತಿಯೆಂದರೆ, ಘಟನೆಯ ಬಗ್ಗೆ ತನ್ನ ಮಗನಿಗೆ ಹೇಳಬೇಡಿ ಎಂದು ಗಾಂಧಿ ಅಧಿಕಾರಿಗಳಿಗೆ ಮನವಿ ಮಾಡಿದ ನಂತರ ಮತ್ತು ಸಿಐಎಸ್ಎಫ್ ಒಪ್ಪಿಕೊಂಡಿದ್ದಾರೆ. ನಂತರ ಮಗನಿಗೆ ತಿಳಿಯದಂತೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲಿ ಅವರನ್ನು ಬಂಧಿಸಲಾಗಿದೆ.
ಇದೀಗ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ವಂಚನೆ, ಫೋರ್ಜರಿ ಮತ್ತು ಸೋಗು ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.