ತೆರಿಗೆ ವಂಚಿಸಲು ಬಗೆಬಗೆಯಲ್ಲಿ ಚಿನ್ನ ಸಾಗಿಸಿ ಸಿಕ್ಕಿಬೀಳುವ ಉದಾಹರಣೆ ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತದೆ. ಇದೀಗ ದುಬೈನಿಂದ ಚೆನ್ನೈಗೆ ಗುದನಾಳದಲ್ಲಿ ಚಿನ್ನ ಸಾಗಿಸುವಾಗ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.
40 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್‌ನ 810 ಗ್ರಾಂ ಚಿನ್ನ ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಿದ್ದಾರೆ.
ನಾಲ್ಕು ಬಂಡಲ್ ಚಿನ್ನದ ಪೇಸ್ಟ್ ರೂಪದಲ್ಲಿದ್ದ 948 ಗ್ರಾಂ ತೂಕದ ಚಿನ್ನ ಸಾಗಿಸಲಾಗಿದೆ. 810 ಗ್ರಾಂ ತೂಕದ ಮತ್ತು. 40.35 ಲಕ್ಷ ಮೌಲ್ಯದ ಚಿನ್ನವನ್ನು ಬಂಡಲ್‌ನಿಂದ ಹೊರತೆಗೆಯಲಾಯಿತು.
ಹೀಗೆ ಬಯಲಾಯ್ತು ಬುರ್ಕಾ ಧರಿಸಿ ವಿಮಾನವೇರಿದ್ದ ಕೊರೊನಾ ಪಾಸಿಟಿವ್ ವ್ಯಕ್ತಿಯ ಬಣ್ಣ..!
ಕಸ್ಟಮ್ಸ್ ನಿಯಮಗಳ ಪ್ರಕಾರ, ವಿದೇಶದಿಂದ ಹಿಂದಿರುಗಿದ ಭಾರತೀಯ ಪುರುಷ ನಿವಾಸಿಗಳು 20 ಗ್ರಾಂವರೆಗೆ ತೂಕವಿರುವ ಮೌಲ್ಯದ ಚಿನ್ನದ ಆಭರಣಗಳನ್ನು ಸುಂಕ ರಹಿತವಾಗಿ ತರಬಹುದು. ಮಹಿಳೆಯರಾದರೆ ಸುಂಕ ರಹಿತವಾಗಿ 40 ಗ್ರಾಂವರೆಗೆ ತರಲು ಅವಕಾಶವಿದೆ.
ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಿಂದ ಚಿನ್ನವನ್ನು ಅಕ್ರಮವಾಗಿ ತರುವುದು ಸಾಮಾನ್ಯ ಸಂಗತಿ. ಕಳೆದ ವರ್ಷ ಡಿಸೆಂಬರ್‌ನಲ್ಲಿ ದುಬೈನಿಂದ ಹಿಂದಿರುಗಿದ ಇಬ್ಬರನ್ನು ಗುದನಾಳದಲ್ಲಿ ಚಿನ್ನದ ಪೇಸ್ಟ್‌ನೊಂದಿಗೆ ಬಂಧಿಸಲಾಗಿತ್ತು.