ಸರಕು ಸಾಗಾಟದ ವಿಮಾನವೊಂದರ ಚಕ್ರದ ಬಳಿ ಕುಳಿತುಕೊಂಡ ವ್ಯಕ್ತಿಯೊಬ್ಬ 11 ಗಂಟೆ ಫ್ಲೈಟ್ ಬಳಿಕ ಪವಾಡಸದೃಶವಾಗಿ ಪಾರಾಗಿ ಬಂದಿದ್ದಾನೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ನೆದರ್ಲೆಂಡ್ಸ್‌ನ ಆಮ್ಸ್‌ಸ್ಟರ್‌ಡ್ಯಾಂಗೆ ಹೊರಟಿದ್ದ ವಿಮಾನದಲ್ಲಿ ಈ ವ್ಯಕ್ತಿ ಹೀಗೆ ಹೊರಟಿದ್ದಾನೆ.
ಇಡಿಯ ಪ್ರಯಾಣದುದ್ದಕ್ಕೂ ಈತ ವಿಮಾನದ ಗಾಲಿ ಪ್ರದೇಶದಲ್ಲಿ ಕುಳಿತುಕೊಂಡಿದ್ದು, ಆಮ್‌ಸ್ಟರ್‌ಡ್ಯಾಂನ ಶಿಫೋಲ್ ವಿಮಾನ ನಿಲ್ದಾಣದ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದಾನೆ. ಸದ್ಯಕ್ಕೆ ಈತ ಚೇತರಿಸಿಕೊಂಡಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ಡಚ್ ಮಿಲಿಟರಿ ಪೊಲೀಸರು ತಿಳಿಸಿದ್ದಾರೆ. ಈತನ ದೇಹದ ತಾಪಮಾನ ತಪಾಸಣೆ ಮಾಡಿದ ಬಳಿಕ ಆತನನ್ನು ಚೆಕಪ್‌ಗೆಂದು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ʼದೀಪಾವಳಿʼಗೂ ಮುನ್ನ ಮನೆಯ ಈ ಜಾಗವನ್ನು ಅವಶ್ಯಕವಾಗಿ ಸ್ವಚ್ಛಗೊಳಿಸಿ
“ಭಾರೀ ಶೀತಮಯ ವಾತಾವರಣದಲ್ಲೂ ಸಹ ವಿಮಾನದಲ್ಲಿ 10,000 ಕಿಮೀ ಪ್ರಯಾಣಿಸಿದ ಈತನನ್ನು ಕಂಡು ನಮಗೆ ಅಚ್ಚರಿಯಾಗಿದೆ,” ಎಂದು ಡಚ್ ಮಿಲಿಟರಿ ಪೊಲೀಸ್ ವಕ್ತಾರೆ ಜೋವಾನ್ನೆ ಹೆಲ್ಮಂಡ್ಸ್ ತಿಳಿಸಿದ್ದಾರೆ. ವಿಮಾನವು ನೈರೋಬಿ ನಿಲ್ದಾಣದಲ್ಲಿ ಸಹ ಒಂದು ನಿಲುಗಡೆ ಕೊಟ್ಟಿದ್ದು, ಈ ವ್ಯಕ್ತಿ ಹೇಗೆ ಹೋಗಿ ಕಾರ್ಗೋ ವಿಮಾನದ ಆ ಭಾಗದಲ್ಲಿ ಕುಳಿತ ಎಂಬುದು ತಿಳಿದು ಬಂದಿಲ್ಲ.
ಈತನಿಗೆ ತಮ್ಮ ದೇಶದಲ್ಲಿ ಆಶ್ರಯ ಕೊಡಬೇಕೇ ಎಂಬ ಬಗ್ಗೆ ಡಚ್ ಅಧಿಕಾರಿಗಳು ನಿರ್ಧರಿಸಲು ಶಾಸನಾತ್ಮಕ ಪ್ರಕ್ರಿಯೆಯೊಂದಕ್ಕೆ ಚಾಲನೆ ಕೊಟ್ಟಿದ್ದಾರೆ.