ತನ್ನ ಸಾಮರ್ಥ್ಯ ಮೀರಿದ ಜನಸಂಖ್ಯೆಯಿಂದಾಗಿ ರಾಜಧಾನಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಸಂದರ್ಶನದಲ್ಲಿ ಪಾಸ್ ಆಗುವುದಕ್ಕಿಂತ ಕಷ್ಟವಾದ ವಿಚಾರವೆಂದರೆ ಬಾಡಿಗೆ ಮನೆ ಹುಡುಕುವುದು.
ಈ ಪರಸ್ಥಿತಿಯನ್ನು ವಿನೋದಮಯವಾಗಿ ತೋರಿರುವ ನೆಟ್ಟಿಗರೊಬ್ಬರು, ತಾವೆಷ್ಟು ಪುಟ್ಟ ಜಾಗದಲ್ಲಿ ವಾಸಿಸುತ್ತಿದ್ದಾರೆ ಎಂದು ತೋರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
“ಬೆಂಗಳೂರಿನಲ್ಲಿ ಕೊನೆಗೂ ಒಂದು ಸುಸಜ್ಜಿತ ಮನೆಯೊಂದನ್ನು ಪತ್ತೆ ಮಾಡಿದೆ. ಗೇಟೆಡ್ ಸೊಸೈಟಿ ಹಾಗೂ 24/7 ಸೆಕ್ಯೂರಿಟಿ ಎಲ್ಲಾ ಇದೆ,” ಎಂದು ಕ್ಯಾಪ್ಷನ್ ಕೊಟ್ಟು ಈ ಕಿರಿದಾದ ಮನೆಯ ಚಿತ್ರವೊಂದನ್ನು ವ್ಯಂಗ್ಯವಾಗಿ ಶೇರ್ ಮಾಡಿದ್ದಾರೆ ಮಂಥನ್ ಗುಪ್ತಾ ಹೆಸರಿನ ಈ ನೆಟ್ಟಿಗ.
ಈ ಟ್ವೀಟ್‌ಗೆ ಭಾರೀ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕಾಮೆಂಟ್‌ಗಳ ಮೂಲಕ ನೆಟ್ಟಿಗರು ಖುದ್ದು ತಮ್ಮದೇ ಅನುಭವಗಳ ಮಾತುಗಳನ್ನು ಆಡಿದ್ದಾರೆ. “ಕೋಣೆಯಲ್ಲಿ ಸೂರ್ಯನ ಬೆಳಕು ಸಿಗುವ ಕಾರಣ ಇಲ್ಲಿ ವಾಸಿಸುವ ಯಾರೇ ಆದರೂ ಅದೃಷ್ಟವಂತರು,” ಎಂದು ಹೇಳಿದ್ದಾರೆ.
“ಇದು ನನ್ನ ಕೋಣೆಗಿಂತ ಕೇವಲ 20% ಚಿಕ್ಕದು. ನನಗೆ ಭದ್ರತೆಯೂ ಇಲ್ಲ,” ಎನ್ನುತ್ತದೆ ಮತ್ತೊಂದು ಟ್ವೀಟ್.