alex Certify ಹೆಚ್ಚು ಕುಡಿದಿದ್ದೆ ಅರ್ಜೆಂಟ್​ ಬಂತು ಎಂದು ಮೆಟ್ರೊ ನಿಲ್ದಾಣದಲ್ಲೇ ಮೂತ್ರ ವಿಸರ್ಜನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚು ಕುಡಿದಿದ್ದೆ ಅರ್ಜೆಂಟ್​ ಬಂತು ಎಂದು ಮೆಟ್ರೊ ನಿಲ್ದಾಣದಲ್ಲೇ ಮೂತ್ರ ವಿಸರ್ಜನೆ….!

ನವದೆಹಲಿ: ದೆಹಲಿ ಮೆಟ್ರೋ ನಿಲ್ದಾಣದ ಟ್ರ್ಯಾಕ್‌ನಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಕ್ಟೋಬರ್ 29 ರಂದು ಸಂಜೀವ್ ಬಬ್ಬರ್ ಅವರು ಟ್ವಿಟರ್‌ನಲ್ಲಿ ಈ ವಿಡಿಯೋ ಶೇರ್​ ಮಾಡಿದ್ದಾರೆ.

ಪ್ಲಾಟ್‌ಫಾರ್ಮ್‌ನ ಹಳದಿ ರೇಖೆಯ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

“ನೀವು ಎಲ್ಲಿ ಮೂತ್ರ ಮಾಡುತ್ತಿದ್ದೀರಿ ಎಂಬುದು ಗೊತ್ತಿದೆಯೆ ? ಇಲ್ಲಿ ಯಾಕೆ ಮೂತ್ರ ಮಾಡುತ್ತಿರುವಿರಿ” ಎಂದು ಪ್ರಶ್ನಿಸಿದಾಗ ಆ ವ್ಯಕ್ತಿ ಸ್ವಲ್ಪ ಹೆಚ್ಚಿಗೆ ಕುಡಿದಿದ್ದೆ. ಅದಕ್ಕೇ ಅರ್ಜೆಂಟ್​ ಆಗಿ ಆಯಿತು ಎಂದಿದ್ದಾನೆ ! ಈ ವಿಡಿಯೋವನ್ನು ದೆಹಲಿ ಮೆಟ್ರೋ ರೈಲು ನಿಗಮ (DMRC) ಮತ್ತು CMO ದೆಹಲಿಯ ಅಧಿಕೃತ ಖಾತೆಗಳಿಗೆ ಟ್ಯಾಗ್ ಮಾಡಲಾಗಿದೆ.

ವಿಡಿಯೋ ನೋಡಿದ ಮೆಟ್ರೊ ಅಧಿಕಾರಿಗಳು, ಈ ಬಗ್ಗೆ ತನಿಖೆ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದು ನಡೆದಿರುವುದು ದೆಹಲಿಯ “ಮಾಳವೀಯ ನಗರ ಮೆಟ್ರೋ ನಿಲ್ದಾಣ” ಎನ್ನಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...