ಗೆಳೆಯರೊಂದಿಗೆ ಡಿನ್ನರ್‌ಗೆಂದು ಹೋಗಿದ್ದ ವೇಳೆ ಮೆನುವಿನಲ್ಲಿದ್ದ ಅತ್ಯಂತ ಕಡಿಮೆ ಬೆಲೆಯ ಖಾದ್ಯವನ್ನು ತನ್ನ ಗರ್ಲ್‌ಫ್ರೆಂಡ್ ಆರ್ಡರ್ ಮಾಡಿದ್ದರಿಂದ ತನಗೆ ಭಾರೀ ಅವಮಾನವಾಗಿದ್ದಾಗಿ ವ್ಯಕ್ತಿಯೊಬ್ಬ ಫೇಸ್ಬುಕ್‌ನಲ್ಲಿ ಹೇಳಿಕೊಂಡಿದ್ದಾನೆ.
ಮಲೇಷ್ಯಾದ ಈ ಅನಾಮಿಕ, “ನನ್ನ ಗರ್ಲ್‌ಫ್ರೆಂಡ್ ಕೆಲವೊಮ್ಮೆ ಹೀಗೆ ಮಾಡುವ ಮೂಲಕ ನನಗೆ ಗೆಳೆಯರ ಮುಂದೆ ಮುಜುಗರವಾಗುವಂತೆ ಮಾಡುತ್ತಾಳೆ. ಈ ರೀತಿ ಮತ್ತೆ ಮಾಡದಂತೆ ಕೇಳಿಕೊಂಡಾಗ ಆಕೆಗೆ ಬೇಸರವಾಗಿ ಕಣ್ಣೀರಧಾರೆ ಸುರಿಯುವ ಮೂಲಕ ನಾನೇನೋ ಆಕೆಗೆ ಬೆದರಿಸಿದೆ ಎನ್ನುವಂತೆ ಮಾಡುತ್ತಾಳೆ. ನನಗೆ ಈ ಸಂಬಂಧದ ಮೇಲೆ ಬೇಸರ ಮೂಡಿದೆ” ಎಂದು ಬರೆದಿದ್ದಾನೆ.
ಮೂರು ದಿನ ಹಾಲಿನ ಜೊತೆ ಇದನ್ನು ಕುಡಿದು ಚಮತ್ಕಾರ ನೋಡಿ
“ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದು ಸ್ನೇಹಿತರೊಂದಿಗೆ ಡಿನ್ನರ್‌ಗೆ ತೆರಳಿದ ವೇಳೆ ನಾವೆಲ್ಲಾ ಮೆನು ನೋಡುತ್ತಿದ್ದೆವು. ನನ್ನ ಗರ್ಲ್‌ಫ್ರೆಂಡ್ ತನಗೆ ಫಿಶ್ ಮತ್ತು ಚಿಪ್ಸ್ ಬೇಕೆಂದು ಕೇಳಿದಳು. ರೆಸ್ಟೋರೆಂಟ್ ಕಳಪೆ ಗುಣಮಟ್ಟದ ಮೀನನ್ನು ತರುವ ಕಾರಣ ಆ ಖಾದ್ಯ ಅಷ್ಟು ಚೆನ್ನಾಗಿರುವುದಿಲ್ಲ ಎಂದು ನನ್ನ ಸ್ನೇಹಿತನೊಬ್ಬ ಹೇಳಿ ಅದರ ಬದಲಿಗೆ ಬೇರೊಂದು ಖಾದ್ಯ ಪ್ರಯತ್ನಿಸಲು ತಿಳಿಸಿದ,” ಎಂದು ಈತ ಹೇಳಿಕೊಂಡಿದ್ದಾನೆ. “ಆದರೆ ಅದು ದುಬಾರಿ,” ಎಂದು ಆತನ ಗರ್ಲ್ ಫ್ರೆಂಡ್ ಪ್ರತಿಕ್ರಿಯಿಸಿದ್ದಾಳೆ.
“ಇದು ಸರಿ ಎನಿಸಲಿಲ್ಲ. ನನಗೆ ಬೇರೊಂದು ಖಾದ್ಯವನ್ನು ಖರೀದಿಸಲು ಆಗೋದಿಲ್ಲವೇನೋ ಎಂಬಂತೆ. ವರ್ಷವೆಲ್ಲಾ ದುಡಿಯುವ ನಾನು ಅಪರೂಪಕ್ಕೊಮ್ಮೆ ಒಳ್ಳೆಯ ಭೋಜನ ಸವಿಯುವಷ್ಟು ಸಮರ್ಥನಿದ್ದೇನೆ. ನನಗೆ ಸ್ಥಳದಲ್ಲಿ ಕೋಪ ಬರದೇ ಇದ್ದರೂ, ರೇಟ್ ಬಗ್ಗೆ ನನ್ನ ಗರ್ಲ್‌ಫ್ರೆಂಡ್ ಕಾಮೆಂಟ್ ಮಾಡುತ್ತಲೇ ನನ್ನ ಸ್ನೇಹಿತರೆಲ್ಲಾ ನಮ್ಮತ್ತ ನೋಡುತ್ತಿದ್ದುದ್ದು ಎಷ್ಟು ನಾಚಿಕೆ ತರಿಸಿತು ಗೊತ್ತೇ? ಆಕೆ ನನ್ನನ್ನು ಅವಮಾನಿಸಿದ್ದಾಳೆ,” ಎಂದು ಈತ ಹೇಳಿಕೊಂಡಿದ್ದಾನೆ.
ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್
ಕಥೆ ಕೇಳಿದ ನೆಟ್ಟಿಗರು ಗರ್ಲ್‌ಫ್ರೆಂಡ್ ಪರ ನಿಂತಿದ್ದು, ಆಕೆ ಮೊದಲು ತನ್ನ ಈ ಬಾಯ್‌ಫ್ರೆಂಡ್‌ಗೆ ಟಾಟಾ ಹೇಳಬೇಕೆಂದು ಸೂಚಿಸಿದ್ದಾರೆ. “ಆಕೆಯನ್ನು ಆಕೆಯ ಪಾಡಿಗೆ ಬಿಟ್ಟುಬಿಡಿ,” ಎಂದು ಒಬ್ಬರು ಅಂದರೆ, “ಬ್ರೇಕ್ ಅಪ್ ಆಗಿ. ನಿಮ್ಮ ಗರ್ಲ್‌ಫ್ರೆಂಡ್‌ಗೆ ಮತ್ತೊಮ್ಮೆ ಅವಮಾನ ಮಾಡಬೇಡಿ,” ಎಂದಿದ್ದಾರೆ.