
ಇಂಟರ್ನೆಟ್ ನಲ್ಲಿ ಆಗಾಗ್ಗೆ ವಿಲಕ್ಷಣವಾದ, ಮನಸ್ಸಿಗೆ ಮುದ ನೀಡುವ ಮುಂತಾದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಜನಸಾಮಾನ್ಯರನ್ನು ದಿಗ್ಭ್ರಮೆಗೊಳಿಸುತ್ತದೆ. ಇನ್ಸ್ಟಾಗ್ರಾಮ್ನಲ್ಲಿ ಪುಟವೊಂದು ಹಂಚಿಕೊಂಡ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ತನ್ನ ವಾಹನದ ಕಿಟಕಿಯಿಂದ ಹುಲಿಗೆ ಆಹಾರವನ್ನು ನೀಡಿದ್ದಾನೆ. ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ದಿ ಅಮೇಜಿಂಗ್ ಟೈಗರ್ಸ್ ಎಂಬ ಪೇಜ್ ಹಂಚಿಕೊಂಡಿದೆ. ವಿಡಿಯೋದಲ್ಲಿ, ಬಸ್ ಚಾಲಕ ಹುಲಿಯ ಮುಂದೆ ಕೋಲಿನ ಮೇಲೆ ಮಾಂಸದ ತುಂಡನ್ನು ನೀಡುತ್ತಿರುವುದನ್ನು ಕಾಣಬಹುದು. ಈ ವೇಳೆ ಓಡಿ ಬಂದ ಹುಲಿ ವಾಹನದ ಕಿಟಕಿಯ ಹತ್ತಿರ ಬಂದು ತಕ್ಷಣ ಆಹಾರವನ್ನು ನುಂಗಿದೆ. ನಂತರ ಹುಲಿ ತನ್ನ ಮುಖವನ್ನು ಒರೆಸಿಕೊಂಡಂತೆಯೂ ಕಾಣುತ್ತದೆ.
ಈ ವಿಡಿಯೋ ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ಆನ್ಲೈನ್ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರು ಸಾಕಷ್ಟು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು ಇದನ್ನು ಅತ್ಯಂತ ಅಪಾಯಕಾರಿ ಎಂದು ಹೇಳಿದ್ದರೆ, ಇತರರು ಇದನ್ನು ಸಂತೋಷಕರ ದೃಶ್ಯ ಎಂದು ಹೇಳಿದ್ದಾರೆ.
ಪ್ರೀತಿ ಮತ್ತು ಪ್ರೀತಿಯ ಭಾಷೆಯನ್ನು ಪ್ರಾಣಿಗಳು ಸಹ ಅರ್ಥ ಮಾಡಿಕೊಳ್ಳುತ್ತವೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಇದು ಸುರಕ್ಷಿತವಲ್ಲ ಎಂದು ಹೇಳಿದ್ದಾರೆ.