
ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಪುಶ್‌ಅಪ್‌ಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಕುಳಿತ ಅವರು ಬೆನ್ನಿನ ಭಾಗದ ಮೂಲಕ ವ್ಯಾಯಾಮವನ್ನು ಪ್ರಯತ್ನಿಸುವಾಗ ಎಡವಿ ಬಿದ್ದಿದ್ದಾರೆ. ಹಾಗಂತ ತಾನು ಕೆಳಗೆ ಬಿದ್ದೆ ಅಂತಾ ತೋರ್ಪಡಿಸಿಕೊಳ್ಳದ ಅವರು, ಬಿದ್ದ ಸ್ಥಳದಿಂದಲೇ ಕುಳಿತು ವ್ಯಾಯಾಮವನ್ನು ಮುಂದುವರೆಸಿದ್ದಾರೆ.
ಆರಂಭವು ಹೇಗಿದ್ದರೂ ಪರವಾಗಿಲ್ಲ, ಮುಕ್ತಾಯವು ಯಾವಾಗಲೂ ಇದೇ ಶೈಲಿಯಲ್ಲಿರಬೇಕು ಎಂದು ಶೀರ್ಷಿಕೆ ನೀಡಿ, ವಿಡಿಯೋ ಸಹಿತ ಪೋಸ್ಟ್ ಮಾಡಿದ್ದಾರೆ. ಇದು ಸಾವಿರಾರು ವೀಕ್ಷಣೆಗಳು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ತನ್ನನ್ನು ತಾನು ಬಿಟ್ಟುಕೊಡದ ವ್ಯಕ್ತಿಯ ಮನೋಭಾವವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ವ್ಯಕ್ತಿಯು ಕೆಳಗೆ ಬಿದ್ದರೂ ತಾನು ನಿಭಾಯಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸ್ಪೂರ್ತಿದಾಯಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಅಧಿಕಾರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.