ಕೆಲ ಪೋಷಕರು ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ನೃತ್ಯ ಮಾಡದಂತೆ ನಿರ್ಬಂಧಿಸುವುದೇ ಹೆಚ್ಚು. ಆದರೆ ವಿಭಿನ್ನ ಮತ್ತು ವಿಶೇಷ ಘಟನೆಯೊಂದರಲ್ಲಿ ತಂದೆಯೊಬ್ಬರು ತಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ನೃತ್ಯ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ.
ಉದ್ಯಾನವನದಲ್ಲಿ ರೀಲ್ಸ್ ಮಾಡ್ತಿದ್ದ ಯುವಕ ಮತ್ತು ಯುವತಿ ಬಳಿ ಬಂದ ವ್ಯಕ್ತಿಯೊಬ್ಬರು ತನ್ನ ಮಕ್ಕಳಿಗೂ ನೃತ್ಯ ಹೇಳಿಕೊಡುವಂತೆ ಕೇಳಿಕೊಂಡಿದ್ದಾರೆ. ಅವರ ಮಕ್ಕಳು ಮೊದಲು ಸಾರ್ವಜನಿಕವಾಗಿ ನೃತ್ಯ ಮಾಡಲು ಹಿಂಜರಿದರೂ ತಂದೆ ಅವರಿಗೆ ಧೈರ್ಯ ನೀಡಿ, ನಿಮಗೆ ಗೊತ್ತಿದ್ದನ್ನು ಮಾಡಿ ಎಂದು ಪ್ರೋತ್ಸಾಹಿಸಿದ್ದಾರೆ.
ರೀಲ್ಸ್ ಮಾಡ್ತಿದ್ದ ಜೋಡಿ ಅವರಿಗೆ ಕೆಲ ಸ್ಟೆಪ್ಸ್ ಹೇಳಿಕೊಟ್ಟಿದೆ. ಈ ವೇಳೆ ಅತ್ಯುತ್ತಮ ಎಂದು ಏನೂ ಇಲ್ಲ. ನಿಮಗೆ ತಿಳಿದಿರುವದನ್ನು ಮಾಡಿ ಎಂದು ತಂದೆ ಹೇಳುವುದನ್ನು ಕೇಳಬಹುದು.
ವೈರಲ್ ಆಗಿರುವ ಈ ವಿಡಿಯೋವನ್ನು ಸಾಧನಾ ಎಂಬ ಬಳಕೆದಾರರು ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಧನಾ ,ಪ್ರಣವ್ ಹೆಗ್ಡೆ ಎಂಬ ಯುವಕನೊಂದಿಗೆ ರೀಲ್ಸ್ ಗಾಗಿ ನೃತ್ಯ ಮಾಡುವುದನ್ನು ಕಾಣಬಹುದು.
ಮಕ್ಕಳನ್ನು ತಂದೆ ನೃತ್ಯ ಮಾಡುವಂತೆ ಪ್ರೋತ್ಸಾಹಿಸುವ ಈ ವೀಡಿಯೋ ಇಲ್ಲಿಯವರೆಗೆ 9 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅಪ್ಪನ ಸ್ಫೂರ್ತಿ ಮತ್ತು ಪ್ರೋತ್ಸಾಹವನ್ನು ಮೆಚ್ಚಿಕೊಂಡಿದ್ದಾರೆ.
https://www.youtube.com/watch?v=QC39JPy67ao