![](https://kannadadunia.com/wp-content/uploads/2025/02/tamilnadu.jpg)
ಚೆನ್ನೈ: ಅಂಗಡಿಯವನು ಮಾಂಸ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೋರ್ವ ಆತನ ಅಂಗಡಿ ಮುಂದೆ ಕೊಳೆತ ಶವ ತಂದು ಬಿಸಾಕಿ ಹೋಗಿರುವ ಘಟನೆ ತಮಿಳುನಾಡಿನ ಪಳನಿ ಚಿಟ್ಟಿಪಟ್ಟಿಯಲ್ಲಿ ನಡೆದಿದೆ.
ಸ್ಮಶಾನದಲ್ಲಿ ಕೆಲಸ ಮಾಡುವ ಕುಮಾರ್ ಎಂಬಾತ ಮಣಿಯರಸನ್ ಎಂಬುವವರು ನಡೆಸುತ್ತಿದ್ದ ಖಾಯಂ ಗ್ರಾಹಕನಾಗಿದ್ದ. ಅಂಗಡಿಗೆ ಹೋಗಿ ಮಾಂಸ ಕೇಳಿದಾಗ ಮಣಿಯರಸನ್ ನಿರಾಕರಿಸಿದ್ದಾರೆ. ಇಬ್ಬರ ನಡುವೆ ಸಣ್ಣ ಜಗಳವಾಗಿದೆ. ಬಳಿಕ ಅಲ್ಲಿಂದ ಬಂದ ಕುಮಾರ್, ಸ್ಮಶಾನಕ್ಕೆ ಹೋಗಿ ಅರ್ಧ ಕೊಳೆತ ಶವವನ್ನು ತಂದು ಅಂಗಡಿ ಮುಂದೆ ಬಿಸಾಕಿ ಹೋಗಿದ್ದಾನೆ. ಇದನ್ನು ಕಂಡು ಅಂಗಡಿಯವರು, ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ.
ಅಂಗಡಿ ಮಾಲೀಕ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಶವ ತೆರವುಗೊಳಿಸಿದ್ದಾರೆ. ಪರಾರಿಯಾಗಿರುವ ಆರೋಪಿ ಕುಮಾರ್ ಗಾಗಿ ಹುಡುಕಾಟ ನಡೆಸಿದ್ದಾರೆ.