![](https://kannadadunia.com/wp-content/uploads/2023/05/98acd65e-fd88-476b-8831-d4adfd0cc35b.jpg)
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಪೊಲೀಸ್ ಠಾಣೆ ಉಸ್ತುವಾರಿಯ ಕುರ್ಚಿಯ ಮೇಲೆ ಕುಳಿತು ಮದ್ಯ ಸೇವಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ.
ಸಹರಾನ್‌ಪುರದ ಖಾತಾ ಖೇರಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಇಮ್ರಾನ್ ಎಂದು ಗುರುತಿಸಲಾದ ವ್ಯಕ್ತಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಪೊಲೀಸ್ ಠಾಣೆಯ ಉಸ್ತುವಾರಿ ಸಚಿನ್ ತ್ಯಾಗಿ ಅವರ ಕುರ್ಚಿಯ ಮೇಲೆ ಕುಳಿತು ಲೋಟಕ್ಕೆ ಮದ್ಯ ಸುರಿಯುತ್ತಿರುವುದು ಕಂಡುಬಂದಿದೆ.
ಫೋಟೋದಲ್ಲಿ ಮೇಜಿನ ಮೇಲೆ ಮದ್ಯದ ಜೊತೆಗೆ ಸ್ನ್ಯಾಕ್ಸ್ ಮತ್ತು ನೀರಿನ ಬಾಟಲಿಗಳನ್ನು ಇರಿಸಿರೋದು ಕಾಣುತ್ತದೆ.
ಮಾರ್ಚ್‌ನಲ್ಲಿ ಹೋಳಿ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಫೋಟೋ ತೆಗೆಯಲಾಗಿದೆ ಎಂದು ನಂಬಲಾಗಿದೆ. ಪೋಟೋ ಪೊಲೀಸರ ಗಮನಕ್ಕೆ ಬಂದ ತಕ್ಷಣ ಎಸ್‌ಎಸ್‌ಪಿ ವಿಪಿನ್ ತಾಡಾ ಅವರು ಸಚಿನ್ ತ್ಯಾಗಿಯನ್ನು ಅಮಾನತುಗೊಳಿಸಿದ್ದಾರೆ. ಕೆಲ ದಿನಗಳ ಹಿಂದೆ ಪೊಲೀಸರು ಈ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.