
ಖದೀಮ್ ಬೌಪ್ ಹೆಸರಿನ ಈತ ತನ್ನ ಪ್ರೇಯಸಿ ಡಿಯೌಮ್ ನೆರವಿಗೆ ಬರಲು ಹೀಗೆ ಮಾಡಿದ್ದಾನೆ. ಆದರೆ ಯಾವ ಕೋನದಲ್ಲೂ ತನ್ನ ಗರ್ಲ್‌ಫ್ರೆಂಡ್‌ನಂತೆ ಕಾಣದ ಖದೀಮ್, 19 ವರ್ಷದ ತನ್ನ ಪ್ರೇಯಸಿಯ ಶಾಲಾ ಪರೀಕ್ಷೆಯಲ್ಲಿ ಆಕೆಗೆ ನೆರವಾಗಲು ಹೋಗಿ ಫಜೀತಿಗೆ ಸಿಲುಕಿದ್ದಾನೆ.
ಸೇಂಟ್ ಲೂಯಿಸ್ ನಗರದ ಗಾಸ್ಟನ್ ಬರ್ಗರ್ ವಿವಿಯಲ್ಲಿ ತನ್ನ ಪ್ರೇಯಸಿಯ ಪರವಾಗಿ ಪರೀಕ್ಷೆ ಬರೆಯಲು ಅನೇಕ ದಿನಗಳಿಂದ ಪ್ಲಾನ್ ಮಾಡಿದ ಖದೀಮ್, ವಿಗ್, ಸ್ಕಾರ್ಫ್, ಕಿವಿಯೋಲೆಗಳು ಹಾಗೂ ಮೇಕಪ್ ಎಲ್ಲಾ ಹಾಕಿದ್ದಾನೆ.
ಪರೀಕ್ಷೆಯ ಮೊದಲ ಮೂರು ದಿನ ಈತನ ಪ್ಲಾನ್ ಕೆಲಸ ಮಾಡಿದೆ. ಆದರೆ ನಾಲ್ಕನೇ ದಿನ ಪರೀಕ್ಷಾ ಮೇಲ್ವಿಚಾರಕರಿಗೆ ಖದೀಂ ಮೇಲೆ ಅನುಮಾನ ಬಂದು ಪರೀಕ್ಷಿಸಿ ನೋಡಿದ್ದಾರೆ. ಆಗ ಸತ್ಯವೇನೆಂದು ಗೊತ್ತಾಗಿ ಖದೀಂನನ್ನು ಸ್ಥಳೀಯ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.
ಈ ಜೋಡಿಯ ವಿರುದ್ಧ ಪರೀಕ್ಷೆಯಲ್ಲಿ ವಂಚನೆಯೆಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಐದು ವರ್ಷಗಳ ಮಟ್ಟಿಗೆ ರಾಷ್ಟ್ರ ಮಟ್ಟದ ಯಾವುದೇ ಪರೀಕ್ಷೆಯಲ್ಲಿ ಭಾಗಿಯಾಗದಂತೆ ಇಬ್ಬರನ್ನೂ ಬ್ಯಾನ್ ಮಾಡುವ ಸಾಧ್ಯತೆ ಇದೆ. ಗ್ರಹಚಾರ ಕೆಟ್ಟರೆ ಇಬ್ಬರಿಗೂ ಐದು ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇದೆ.