alex Certify ವಿಶೇಷ ಸಾಮರ್ಥ್ಯವುಳ್ಳ ಬಾಲಕನಿಗೆ ಸಾಂತಾಕ್ಲಾಸ್‍ನಿಂದ ಕ್ರಿಸ್ಮಸ್ ಗಿಫ್ಟ್: ಹೃದಯಸ್ಪರ್ಶಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶೇಷ ಸಾಮರ್ಥ್ಯವುಳ್ಳ ಬಾಲಕನಿಗೆ ಸಾಂತಾಕ್ಲಾಸ್‍ನಿಂದ ಕ್ರಿಸ್ಮಸ್ ಗಿಫ್ಟ್: ಹೃದಯಸ್ಪರ್ಶಿ ವಿಡಿಯೋ ವೈರಲ್

Man dressed as Santa gives gifts to specially-abled boy. His priceless reaction is now a viral video - Trending News Newsಪ್ರಪಂಚದೆಲ್ಲೆಡೆ ಕಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ವಾರಕ್ಕಿಂತ ಮೊದಲೇ ಎಲ್ಲಾ ತಯಾರಿಗಳನ್ನು ಜನರು ಮಾಡಿದ್ದು, ಇದೀಗ ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ. ಇದು ಎಲ್ಲರಿಗೂ ಸಂತೋಷ, ಉಡುಗೊರೆಗಳನ್ನು ನೀಡುವ ಹಬ್ಬವಾಗಿದೆ. ಒಂದು ವೇಳೆ ಸಾಂತಾ ಕ್ಲಾಸ್ ವೇಷಧಾರಿಗಳು ಉಡುಗೊರೆ ನೀಡಲು ಬಂದ್ರೆ ಈ ಸಂತೋಷವು ಮತ್ತಷ್ಟು ದ್ವಿಗುಣಗೊಳ್ಳುತ್ತದೆ.

ಹೌದು, ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಹೃದಯಸ್ಪರ್ಶಿ ವಿಡಿಯೋ ನೋಡಿದ್ರೆ ನಿಮ್ಮ ಕಂಗಳಲ್ಲೂ ನೀರು ತರಿಸದೆ ಇರಲಾರದು. ವಿಶೇಷ ಸಾಮರ್ಥ್ಯವುಳ್ಳ ಬಾಲಕನಿಗೆ ಸಾಂತಾ ತನ್ನ ಉಡುಗೊರೆಗಳನ್ನು ನೀಡಲು ಬರುತ್ತಿರುವುದನ್ನು ಕಂಡ ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವಿಡಿಯೋ ಇಂಟರ್ನೆಟ್ ಅನ್ನು ಗೆದ್ದಿದ್ದು, ಖಂಡಿತ ನಿಮ್ಮ ಹೃದಯ ಗೆಲ್ಲಬಹುದು.

ಈಗ ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ, ಯುನೈಟೆಡ್ ಪಾರ್ಸೆಲ್ ಸರ್ವಿಸ್ ಎಂಬ ಬಹುರಾಷ್ಟ್ರೀಯ ಕಂಪನಿಯು ವಿಶೇಷ ಸಾಮರ್ಥ್ಯದ ಬಾಲಕನಿಗೆ ಉಡುಗೊರೆಗಳನ್ನು ನೀಡಲು ಸಾಂತಾ ವೇಷದಲ್ಲಿ ಒಬ್ಬ ವ್ಯಕ್ತಿಯನ್ನು ಕಳುಹಿಸಿದೆ. ಆ ವ್ಯಕ್ತಿ ಸಾಂತಾ ವೇಷ ಧರಿಸಿ ಕಪ್ಪು ಟ್ರಕ್‌ನಲ್ಲಿ ಉಡುಗೊರೆಗಳನ್ನು ತಂದಿದ್ದಾರೆ. ಅದರಲ್ಲಿ ಸಾಂತಾ ಇದ್ದ ಟ್ರಕ್ ಅನ್ನು ಗುರುತಿಸಿದಾಗ, ಬಾಲಕ ಬಹಳ ಸಂತೋಷಗೊಂಡಿದ್ದಾನೆ. ಅದೆಷ್ಟೆಂದರೆ ಆತನಿಗೆ ನಿಂತಲ್ಲಿ ನಿಲ್ಲಲಾರದೆ ಕುಣಿಯುತ್ತಾ, ಸಂತೋಷವನ್ನು ವ್ಯಕ್ತಪಡಿಸಿದ್ದಾನೆ.

ನೆಕ್ಸ್ಟ್ ಡೋರ್‌ ಎಂಬ ಪೇಜ್ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, 80,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹುಡುಗನ ಪ್ರತಿಕ್ರಿಯೆ ನೋಡಿದ ನೆಟ್ಟಿಗರು ಕಣ್ಣೀರು ಹಾಕಿದ್ದಾರೆ.

https://youtu.be/qj8CkVrK4qo

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak se Jak teplota vody Proč semena papriky neklíčí a jak Vědci objevili nejzdravější sacharidy Vepřový jazyk: Tajemství přípravy lahodné lahůdky Odborník na výživu přináší