alex Certify ತಾಯಿಗೆ ಕಿಡ್ನಿ ಕೊಟ್ಟ ಬಾಯ್‌ ಫ್ರೆಂಡ್‌ಗೆ ಗುಡ್‌ಬೈ ಹೇಳಿ ಮತ್ತೊಬ್ಬನ ಮದುವೆಯಾದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಗೆ ಕಿಡ್ನಿ ಕೊಟ್ಟ ಬಾಯ್‌ ಫ್ರೆಂಡ್‌ಗೆ ಗುಡ್‌ಬೈ ಹೇಳಿ ಮತ್ತೊಬ್ಬನ ಮದುವೆಯಾದ ಯುವತಿ

ಈ ಪ್ರೇಮ ಎಂಬುದು ಒಂದಷ್ಟು ಜನರಿಗೆ ಸಿಹಿಯಾದ ಅನುಭವ ಕೊಟ್ಟರೆ ಬಹಳಷ್ಟು ಜನರಿಗೆ ನೋವಿನ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ಇಂಥದ್ದೇ ಶೋಕದ ಕಥೆಯೊಂದರ ನಾಯಕ ಮೆಕ್ಸಿಕೋದ ಶಿಕ್ಷಕ ಉಜ಼ಿಯೆಲ್ ಮಾರ್ಟಿನೆಜ಼್‌.

ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದ ನಿವಾಸಿ ಉಜ಼ಿಯೆಲ್ ತನ್ನ ಮಾಜಿ-ಗರ್ಲ್‌ಫ್ರೆಂಡ್‌ ತಾಯಿಗೆ ಕಿಡ್ನಿ ದಾನ ಮಾಡಿದ ನಿಸ್ವಾರ್ಥ ಪ್ರೇಮಕ್ಕೆ ಪ್ರತಿಯಾಗಿ ತನ್ನ ಮಾಜಿ ಪ್ರೇಯಸಿ ಮಾಡಿದ ವಂಚನೆಯನ್ನು ವಿವರಿಸಿದ್ದಾರೆ. ತನ್ನ ಈ ಹೃದಯಸ್ಪರ್ಶಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುವ ಬದಲಿಗೆ ಆಕೆ ಉಜ಼ಿಯೆಲ್‌ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಲ್ಲದೇ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ.

ನಿಮ್ಮ ಕಿಡ್ನಿ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಇಲ್ಲಿವೆ ಪಂಚ ಸೂತ್ರಗಳು

ತನ್ನ ಈ ನೋವಿನ ಕಥೆಯನ್ನು ತಡೆದುಕೊಳ್ಳಲಾರದ ಉಜ಼ಿಯೆಲ್ ವಿಷಯವನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗಿದ್ದು, ಬಹಳಷ್ಟು ಪತ್ರಿಕೆಗಳಲ್ಲಿ ಸುದ್ದಿಯೂ ಆಗಿದೆ.

“ಆಗಿದ್ದೆಲ್ಲಾ ಆಗಿಹೋಯಿತು, ನಿಮ್ಮನ್ನು ಮೆಚ್ಚುವ ಒಳ್ಳೆಯ ಮಹಿಳೆಯನ್ನು ಕಂಡುಕೊಳ್ಳಿ,” ಎಂದು ಮೆಕ್ಸಿಕೋ ನ್ಯೂಸ್ ಡೈಲಿ ಓದುಗರೊಬ್ಬರು ಆತನಿಗೆ ಸಮಾಧಾನ ಹೇಳಿದ್ದಾರೆ.

ತಾನೀಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದೇನೆಂದು ತಿಳಿಸಿರುವ ಮಾರ್ಟಿನೆಜ಼್‌, ಕಿಡ್ನಿ ಕಸಿಯಿಂದ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

https://twitter.com/i/status/1483917880764817418

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...