
ನೋಡಿದ್ರಾ….. ಈ ವಿಡಿಯೋನ್ನ ಎಷ್ಟು ಮುದ್ದು ಮುದ್ದಾಗಿದೆ ನೋಡಿ. ಸಂದೀಪ್ ಮಾಲ್ ಅನ್ನೋರು ಈ ವಿಡಿಯೋವನ್ನ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 12 ಸೆಕೆಂಡ್‌ನ ಈ ವಿಡಿಯೋ ಕ್ಲಿಪ್‌ನಲ್ಲಿ ಸಂದೀಪ್ ಇವರು ಜಿಮ್‌ನಲ್ಲಿ ಪುಶ್‌ಅಪ್ ಮಾಡೋದನ್ನ ನೋಡಬಹುದು. ಇವರು ಇಲ್ಲಿ ತಮ್ಮ ಮೊಮ್ಮಗಳನ್ನ ತಮ್ಮ ಬೆನ್ನ ಮೇಲೆ ಮಲಗಿಸಿಕೊಂಡು ಪುಶ್‌ಅಪ್ ಮಾಡ್ತಿದ್ದಾರೆ. ಆಕೆ ಕೂಡಾ ತನ್ನ ಪುಟ್ಟ-ಪುಟ್ಟ ಕೈಗಳಿಂದ ಅವರನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಅವರು ಆಕೆಯನ್ನ ಬೀಳಿಸೋಲ್ಲ ಅನ್ನೋ ನಂಬಿಕೆ ಎಷ್ಟು ಇದೆ ಅಂತ ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.
ಈ ವಿಡಿಯೋ ಕ್ಯಾಪ್ಟನ್‌ನಲ್ಲಿ “ನೀವು ಒಂದು ಬಾರಿ ಪುಶ್‌ಅಪ್ ಮಾಡಲು ಸಾಧ್ಯವಾದ್ರೆ, ನೀವು ನಿಮ್ಮ ತೂಕದ ಗಮನಕೊಡಿ. ಮೂರು ವರ್ಷಗಳಲ್ಲಿ ಆಕೆ 18 ಕೆ.ಜಿಯಷ್ಟು ಹೆಚ್ಚಾಗಿರಬಹುದು. ಈಗ ನನಗೆ ವಯಸ್ಸು 60 ನಾನೂ ಈಗಲೂ 15ಕ್ಕಿಂತಲೂ ಹೆಚ್ಚು ಪುಶ್‌ಅಪ್ ಮಾಡೋದಕ್ಕೆ ಪ್ರಯತ್ನ ಪಡ್ತಿದ್ದೇನೆ, “ಎಂದು ಬರೆದಿದ್ದಾರೆ.
ಈ ವಿಡಿಯೋವನ್ನ ಈಗಾಗಲೇ 75ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅದಕ್ಕೆ ನೂರಾರು ಜನರು ಕಾಮೆಂಟ್ ಕೂಡಾ ಮಾಡಿದ್ದಾರೆ. ಒಬ್ಬರಂತೂ – ಇದೊಂದು ಅದ್ಭುತವಾಗಿರೋ ವಿಡಿಯೋ ಎಂದು ಹೇಳಿದ್ದಾರೆ. ಇನ್ನೊಬ್ಬರು ಈ ಮಗು ಬೆನ್ನ ಮೇಲಿಂದ ಬೀಳದೇ ಇರುವ ಹಾಗೆ ಹಿಡಿದಿರೋ ರೀತಿ ನೋಡಿದ್ರೆ ಗೊತ್ತಾಗುತ್ತೆ. ಅದು ನಿಮ್ಮನ್ನು ಎಷ್ಟು ನಂಬಿದೆ ಅಂತ ಎಂದು ಹೇಳಿದ್ದಾರೆ. ಹಾಗೆಯೇ ಇನ್ನೊಬ್ಬ ನೆಟ್ಟಿಗ ಈ ವಯಸ್ಸಲ್ಲೂ ನೀವು 15 ಪುಶ್‌ಅಪ್ ಮಾಡೋದು ಅಂದ್ರೆ ಸಾಮಾನ್ಯ ಮಾತಲ್ಲ. ಇದರ ಅರ್ಥ ನೀವು ಫಿಟ್ ಎಂಡ್ ಫೈನ್ ಆಗಿದ್ದಿರಿ ಅಂತ ಬರೆದಿದ್ದಾರೆ.