alex Certify ಒಬ್ಬಂಟಿ ಎಂದುಕೊಂಡಿದ್ದವನಿಗೆ ಗೊತ್ತಾಯ್ತು ತಂದೆ ಸತ್ಯ: ಸಿಕ್ರು 30 ಸಹೋದರ – ಸಹೋದರಿಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬಂಟಿ ಎಂದುಕೊಂಡಿದ್ದವನಿಗೆ ಗೊತ್ತಾಯ್ತು ತಂದೆ ಸತ್ಯ: ಸಿಕ್ರು 30 ಸಹೋದರ – ಸಹೋದರಿಯರು..!

ಮನೆಯಲ್ಲಿ ಒಬ್ಬನೇ ಮಗನಾಗಿ ನೀವು ಬೆಳೆಯುತ್ತಿರುವ ವೇಳೆ ಅಚಾನಕ್ ನಿಮಗೆ 30 ಸಹೋದರ – ಸಹೋದರಿಯರಿದ್ದಾರೆ ಎಂಬುದು ತಿಳಿದ್ರೆ ಏನಾಗಬೇಡ? ಆಂಡಿ ನಬಿಲ್ ಜೀವನದಲ್ಲಿ ಇದು ಸಂಭವಿಸಿದೆ. ಮನೆಯಲ್ಲಿ ಮುದ್ದಿನ ಮಗನಾಗಿ ಬೆಳೆದಿದ್ದ ಆಂಡಿಗೆ ಡಿಎನ್ಎ ಪರೀಕ್ಷೆಯಲ್ಲಿ ದೊಡ್ಡ ಸತ್ಯ ಗೊತ್ತಾಗಿದೆ.

ಘಟನೆ ನಡೆದಿರುವುದು ಲಂಡನ್ ನಲ್ಲಿ. ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್ ನಲ್ಲಿ ಡಿಎನ್ಎ ಪರೀಕ್ಷೆ ಬಗ್ಗೆ ಹೆಚ್ಚಿನ ಚರ್ಚೆಯಾಗ್ತಿದೆ. ಕಳೆದ ಡಿಸೆಂಬರ್ ನಲ್ಲಿ ಆಂಡಿ ಡಿಎನ್ಎ ಪರೀಕ್ಷೆ ಮಾಡಿಸಿಕೊಂಡಿದ್ದಾನೆ. ಅದ್ರ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಡಿಎನ್ಎ ಪರೀಕ್ಷೆ ವೇಳೆ ಆತನಿಗೆ 30 ಸಹೋದರ – ಸಹೋದರಿ ಇರುವುದು ಗೊತ್ತಾಗಿದೆ. ತಂದೆಗೆ ಇಷ್ಟೊಂದು ಮಕ್ಕಳಿದ್ದು, ಇದ್ರಲ್ಲಿ ಆಂಡಿ ಎರಡನೇಯವನು.

ತಂದೆ ಈ ಹಿಂದೆ 15 ಮಕ್ಕಳನ್ನು ಸೇರಿಸಿಕೊಂಡು ಪಾರ್ಟಿ ಕೂಡ ಮಾಡಿದ್ದನಂತೆ. ಆಂಡಿಯ ದಾಖಲೆಗಳಲ್ಲಿರುವ ತಂದೆ ಆತನ ತಂದೆಯಲ್ಲ. ಬೇರೆ ವ್ಯಕ್ತಿಯಿಂದ ವೀರ್ಯ ಪಡೆಯಲಾಗಿದೆ. ವೀರ್ಯ ದಾನ ಮಾಡಿದ ವ್ಯಕ್ತಿಗೆ ಒಟ್ಟು 30 ಮಕ್ಕಳಿದ್ದಾರೆ. ಅದ್ರಲ್ಲಿ ಒಬ್ಬಳು ಆಂಡಿ ಸ್ನೇಹಿತೆ ಎನ್ನುವುದು ವಿಚಿತ್ರ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...